ಚಳ್ಳಕೆರೆ : 2023ರ ವಿಧಾನ ಸಭಾ ಚುನಾವಣೆ ಸಂಬAಧ ಈಗಾಗಲೇ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತರಬೇತಿ ನಂತರ ಯಾವುದೇ ಲೋಪದೋಷಗಳಿಲ್ಲದಂತೆ, ಅಹಿತಕರ ಘಟನೆಗೆ ಆಸ್ಪದ ಮಾಡಿಕೊಡದಂತೆ ಚುನಾವಣೆ ಆಯೋಗ ನೀಡಿದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಚುನಾವಣೆ ಕೆಲಸ ನಿರ್ವಹಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಜಿ.ಕೆ.ಹೊನ್ನಯ್ಯ ಕಿವಿಮಾತು ಹೇಳಿದರು.
ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ನೂತನ ಸಭಾಂಗಣದಲ್ಲಿ ಚುನಾವಣೆ ಶಾಖೆಯಿಂದ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ತವ್ಯದ ಜತೆಯಲ್ಲಿ ಚುನಾವಣೆ ಕರ್ತವ್ಯವೂ ಮುಖ್ಯವಾಗಿದ್ದು ಚಾಚು ತಪ್ಪದೆ ಕರ್ತವ್ಯ ನಿರ್ವಹಿಸ ಬೇಕು ನಿಮ್ಮ ನಮ್ಮ ಕರ್ತವ್ಯದಿಂದ ನಿವೃತ್ತಿಯಾದ ಮೇಲೆ ನಮಗೆ ಚುನಾವಣೆ ಕರ್ತವ್ಯಕ್ಕೆ ನೇಮಕ ಮಾಡುವುದಿಲ್ಲ ಚುನಾವಣೆ ಕರ್ತವ್ಯ ನಿಮ್ಮ ಹಕ್ಕು ಎಂದು ಭಾವಿಸಿ ಕೆಲಸ ಮಾಡ ಬೇಕು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶೇ 100 ರಷ್ಟು ಮತದಾನ ನಡೆಯಲು ನಿಷ್ಪಕ್ಷಪಾತ, ಪಾರದರ್ಶಕವಾಗಿ ಮತಗಟ್ಟೆ ಅಧಿಕಾರಿಗಳು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು,

ಸುಮಾರು 5 ವರ್ಷಗಳಿಂದ ನೀಡುವ 6 ಸಾವಿರ ಗೌರವಧನ ಬದಲಾಗಿ 24 ಸಾವಿರ ರೂಗಳಿಗೆ ಹೆಚ್ಚಿಸ ಬೇಕು. ಮತದಾರ ಪರಿಷ್ಕರಣೆಯಲ್ಲಿ ಸತ್ತವರ ಹೆಸರನ್ನು ಡಿಲೀಟ್ ಮಾಡಲು ನೀಡಿದರೂ ಅವುಗಳು ಡಿಲೀಟ್ ಆಗಿಲ್ಲ ಗುರುತಿನ ಚೀಟಿಗಳು ತಲುಪದೆ ಇರುವುದರಿಂದ ಮತದಾರರ ನಮಗೆ ಕೇಳುತ್ತಾರೆ. ಮತಗಟ್ಟೆಗಳಿಗೆ ನೇಮಕಗೊಂಡ ಶಿಕ್ಷಕರು ನಾವು ರಜೆ ದಿನಗಳಲ್ಲಿ ಮತದಾರರ ಮನೆ ಮನೆಗೆ ಹೋಗಿ ಎರಡು ತಿಂಗಳ ಕಾಲ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ ಮಾಡಿ ಮೊಬೈಲ್ ತಂತ್ರಾAಶದಲ್ಲಿ ಅಳವಡಿಸಲಾಗಿದೆ ಅದಕ್ಕೆ ಗೌರವಧನ ಹಾಗೂ ಇ ಎಲ್ ಕೊಡಬೇಕು ನಮ್ಮ ವೈಯುಕ್ತಿಕ ಇಂಟರ್ ನೆಟ್ ಹಾಕಿಸಿಕೊಂಡು ಕೆಲಸ ಮಾಡಿದ್ದೇವೆ ಎಂದು ಆರೋಪ ಮಾಡಿದರು.
ಅಂಚೆ ಬದಲಾಗಿ ನಮಗೆ ನೀಡಿದರೆ ನಾವು ಅವರಿಗೆ ತಲುಪಿಸುತ್ತೇವೆ. ಚುನಾವಣೆ ಶಾಖೆಯಲ್ಲಿ ನಮಗೆ ಸ್ಪಂದಿಸುತ್ತಿಲ್ಲ 2018 ರಿಂದ 2021 ರವರೆಗೆ ಮತದಾರರ ಪಟ್ಟಿಗೆ ಸೇರಿಸಿದ ಗುರುತಿನ ಚೀಟಿಗಳು ಬಂದಿಲ್ಲ ಸರಕಾರಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಮತದಾರರ ಗುರುತಿನ ಚೀಟಿ ಮುಖ್ಯವಾಗಿರುವುದರಿಂದ ಅವುಗಳೇ ಬಂದಿಲ್ಲ ಎಂದರೆ ನಮಗೆ ಜನರು ಪ್ರಶ್ನೆ ಮಾಡುತ್ತಾರೆ. ಶಿಕ್ಷಕರು ಚುನಾವಣೆ ಕರ್ತವ್ಯ ನಿರ್ವಹಿಸುತ್ತೇವೆ ಆದರೆ ಬಿಎಲ್‌ಒ ಗಳಾಗಿ ಕೆಲಸ ಮಾಡಲು ಕಷ್ಟವಾಗುತ್ತಿದೆ ಇನ್ನು ಮುಂದೆ ಯಾದರು ಸಮಸ್ಯೆಗಳನ್ನು ಬಗೆಹರಿಸುವಂತೆ ಶಿಕ್ಷಕರು ದೂರಿನ ಸುರಿಮಳೆ ಗೈದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನೂರಕ್ಕೆ ನೂರಷ್ಟು ಮತದಾದನ ನಡೆಯಲು ನಿಮ್ಮೆಲ್ಲರ ಸಹಕಾರ ಅಗತ್ಯ ನೀವು ಮತಗಟ್ಟೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುವಂತೆ ತಿಳಿಸಿದರು.
ಈದೇ ಸಂಧರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಸಂಪತ್‌ಕುಮಾರ್, ಯೋಜನಾಧಿಕಾರಿ ದಿವಾಕರ್, ಚುನಾವಣೆ ಶಾಖೆಯ ಪ್ರಕಾಶ್ , ಓಬಳೇಶ್, ಸಂಪನ್ಮೂಲ ವ್ಯಕ್ತಿಗಳಾದ ಮಾರುತಿ, ಮಂಜುನಾಥ್,ವೆAಕಟೇಶ್,ಶಿವಮೂತಿ, ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News

You missed

error: Content is protected !!