ಚಳ್ಳಕೆರೆ : ಬಿಜೆಪಿ ಪಕ್ಷದಿಂದ ಆಯೋಜಿಸಿದ ವಿಜಯ ಸಂಕಲ್ಪಯಾತ್ರೆ ಚಳ್ಳಕೆರೆ ನಗರದಕ್ಕೆ ಮಾರ್ಚ 17ರಂದು ಆಗಮಿಸಲಿದ್ದು ಪಕ್ಷದ ಮುಖಂಡರು ಭರ್ಜರಿಯಾಗಿ ರೂಪರೇಷಿ ಮಾಡಿದ್ದಾರೆ.
ಅದರಂತೆ ಮಾರ್ಚ17ರ ಮದ್ಯಾಹ್ನ 1 ಗಂಟೆಗೆ ಚಳ್ಳಕೆರೆ ಕ್ಷೇತ್ರಕ್ಕೆ ಆಗಮಿಸುವ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾದ ಎಂ.ಎಸ್.ಜಯರಾA ಸ್ವಾಗತ ಕೋರಲಿದ್ದಾರೆ ಜೊತೆಯಲ್ಲಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ರಾಮದಾಸ್, ಇನ್ನೂ ಪಕ್ಷದ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಅದರಂತೆ ನಗರಕ್ಕೆ ಆಖಗಮಿಸುವ ರಥವನ್ನು ಭವ್ಯ ಮೆರವಣಿಗೆಯಲ್ಲಿ ವರಿಷ್ಠರಿಗೆ ಸ್ವಾಗತ ಕೋರುತ್ತ ನಗರಕ್ಕೆ ಆಗಮಿಸುವುದು ಎನ್ನಲಾಗಿದೆ.
ಇನ್ನೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಎಸ್.ಜಯರಾA ಮಾತನಾಡಿ, ಇದೇ ಮಾರ್ಚ್ 17ಕ್ಕೆ ಆಗಮಿಸುವ ವಿಜಯ ಸಂಕಲ್ಪ ರಥ ಯಾತ್ರೆಗೆ ಇಡೀ ಕ್ಷೇತ್ರದಲ್ಲಿ ಭವ್ಯ ಸ್ವಾಗತ ಕೋರಲು ಸಜ್ಜಾಗಿದೆ. ಇನ್ನೂ ರಥ ಯಾತ್ರೆ ಉದ್ದಕ್ಕೂ ಭವ್ಯ ಮೆರವಣಿಗೆಯಲ್ಲಿ ಕುಂಬ ಮೇಳೆದೊಂದಿಗೆ ಕೋಲಾಟ, ಡೊಳ್ಳು ಕುಣಿತ, ಈಗೇ ಪ್ರಮುಖ ಗಣ್ಯರಿಗೆ ಪುರ್ಷ್ಪಾಚನೆ ಮಾಡುವ ಮೂಲಕ ಇಡೀ ಕ್ಷೇತ್ರದಲ್ಲಿ ಕೇಸರಿ ಮಯಾ ಮಾಡಲಾಗುವುದು, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲು ಕೊರಿದರು.
ಇನ್ನೂ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ, ಪಿಸಿ.ಮೋಹನ್, ಕಂದಾಯ ಸಚಿವ ಆರ್.ಅಶೋಕ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಇನ್ನೂ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
ಈದೇ ಸಂಧರ್ಭದಲ್ಲಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಪ್ರಬಲ ಟಿಕೆಟ್ ಆಕಾಂಕ್ಷಿ ಎಂ.ಎಸ್.ಜಯರಾA, ಆರ್.ಅನಿಲಕುಮಾರ್, ಶಶಿಧರ್. ರೇಖಾ, ದ್ಯಾಮಣ್ಣ, ಇತರರು ಇದ್ದರು.