ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಹೋಬಳಿಯ ಹಿರೇ ಕಬ್ಬಿಗೆರೆ ಗ್ರಾಮದ ಹಲವು ಮುಖಂಡರು ಕಾಂಗ್ರೇಸ್ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಹಾಲಿ ಶಾಸಕ ಶಾಸಕ ಟಿ.ರಘುಮೂರ್ತಿನೇತೃತ್ವದಲ್ಲಿ ಚಿತ್ರದುರ್ಗ ನಗರದ ಖಾಸಗಿ ಹೋಟೆಲ್‌ನಲ್ಲಿ ಪಕ್ಷ ಸೆರ್ಪಡೆಯಾದರು.
ತದ ನಂತರ ಕ್ಷೇತ್ರದ ಪರಶುರಾಂಪುರ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಮುಂಭಾಗ ಶ್ರೀ ಮೊಪುರಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ನಡೆದ ತ್ರಿಪದಿ ಕವಿ ಸರ್ವಜ್ಞ ಜಯಂತಿಯ ಆಚರಣ ಸಮಾರಂಭದಲ್ಲಿ ಭಾಗವಹಿಸಿ ಸಮುದಾಯವನ್ನು ಕುರಿತು ಮಾತನಾಡಿದರು.
ನಂತರ ಪರಶುರಾಂಪರ ಗ್ರಾಮದ ಕರೆಕಲ್ ಗೊಲ್ಲರಹಟ್ಟಿಯಲ್ಲಿ ನಡೆದ ಕಾಟಮ್ಮಲಿಂಗೇಶ್ವರ ಸ್ವಾಮಿಯ ಹರಿ ಸೇವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.