ಚಳ್ಳಕೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಆರ್. ಧ್ರುವನಾರಾಯಣ ಅವರ ನಿಧನದ ಸುದ್ದಿ ತಿಳಿದು ಆಘಾತದೊಂದಿಗೆ ಚಳ್ಳಕೆರೆ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರು ಮುಖಂಡರು ಕಂಬನಿ ಮಿಡಿದಿದ್ದಾರೆ.
ಇನ್ನೂ ನಗರದ ಶಾಸಕರ ಭವನದಲ್ಲಿ ಧ್ರುವನಾರಾಯಣರವರ ಭಾವಚಿತ್ರ ಇಟ್ಟು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ರಾಜ್ಯ ಅಲ್ಪ ಸಂಖ್ಯಾತರ ಸಂಘಟನಾ ಕಾರ್ಯದರ್ಶಿ ಪರೀದ್ ಖಾನ್ ಹೇಳಿದರು.
ಇದೇ ಸಂಧರ್ಭದಲ್ಲಿ ಅಲ್ಪ ಸಂಖ್ಯಾತರ ಕಾರ್ಯದರ್ಶಿ ನಯಾಜ್, ಪರುಶುರಾಂಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಶಿಧರ್, ಚೇತನ್ ಕುಮಾರ್, ಕಾಂತರಾಜ್, ಸೈಪುಲ್, ಕಬೀರ್, ಖಾದರ್, ಕೃಷ್ಣ, ರೀಜ್ವೀ, ಪಾಪಣ್ಣ, ಮಂಜುನಾಥ್, ಪುರೋತ್ತಮ ನಾಯ್ಕ್ ಇತರರು ಪಾಲ್ಗೋಂಡಿದ್ದರು.