ಚಳ್ಳಕೆರೆ : ವಿಜ್ಞಾನ ನಗರಿಯಲ್ಲಿ ಮಾರ್ಚ್ 12ರಂದು ಇಂದು ನಡೆಯುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಡಾ.ಮಲ್ಲಿಕಾರ್ಜುನಾ ಕಲಮರಹಳ್ಳಿ ರವರು ಅಧ್ಯಕ್ಷರಾಗಿ ಕನ್ನಡ ಡಿಂ, ಡಿಮವ ಬಾರಿಸುವರು ಎಂದು ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಮಾ.12ರಂದು ನಡೆಯುವ ಅಕ್ಷರ ಜಾತ್ರೆಗೆ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದರು,
ಇನ್ನೂ ತಾಲೂಕಿನಲ್ಲಿ ನಡೆಯುವ 4ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ತಾಲೂಕಿನ ಕಲಮರಹಳ್ಳಿ ಗ್ರಾಮದ ಕವಿಗಳು, ಚಿಂತಕರು, ಹಾಗೂ ಬರಹಗಾರರಾದ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅಧ್ಯಕ್ಷತೆ ವಹಿಸುವರು,
ಇನ್ನೂ ಇಂದು ನಡೆಯುವ ಅಕ್ಷರ ಜಾತ್ರೆಗೆ ಸಕಲ ಸಿದ್ದತೆಗಳು ಭರದಿಂದ ಸಾಗಿವೆ ಹಲವು ಕಲಾ ತಂಡಗಳ ಮೂಲಕ ಮುಂಜಾನೇ 8ಗಂಟೆಗೆ ನಗರದ ಚಳ್ಳಕೆರೆಮ್ಮ ದೇವಾಸ್ಥಾನದಿಂದ ಪ್ರಾರಂಭವಾದ ಅಕ್ಷರ ಜಾತ್ರೆಯ ಮೆರವಣಿಗೆ ಕನ್ನಡ ಅಭಿಮಾನಿಗಳೊಂದಿಗೆ ನಗರದ ನೆಹರು, ವೃತ್ತ ಅಂಬೇಡ್ಕರ್ ವೃತ್ತದ ಮೂಲಕ ಪ್ರಮುಖ ಬೀದಿಗಳನ್ನು ಭವ್ಯ ಮೆರವಣಿಗೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಆಗಮಿಸುವುದು ಎಂದರು.
ಇದೇ ಸಂಧರ್ಭದಲ್ಲಿ ಅಧ್ಯಕ್ಷ ಜಿಟಿ.ವೀರಭದ್ರಯ್ಯ, ಜೆ.ಜನಾರ್ಧನ್, ಕ.ಸಾ.ಪಕಾರ್ಯದರ್ಶಿ ಚಿತ್ತಯ್ಯ, ಡಿ.ದಯಾನಂದ್, ಮೃತ್ಯುಂಜಯ, ಟಿ.ಜೆ.ತಿಪ್ಪೆಸ್ವಾಮಿ, ರಾಜಣ್ಣ, ಇತರರು ಇದ್ದರು.

About The Author

Namma Challakere Local News
error: Content is protected !!