ಮೊಳಕಾಲ್ಮೂರು ಕ್ಷೇತ್ರದ ಜನತೆಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಆಶೀರ್ವಾದ ಸದಾಕಾಲ ಇರಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ ವೈ ಸುಜಯ್
ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮೊಳಕಾಲ್ಮೂರು ಕ್ಷೇತ್ರದ ಜನತೆಗೆ ಆಶೀರ್ವದಿಸಲಿ ಎಂದು ಎಲ್ ವೈ ಸುಜಯ್ ಹೇಳಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವದಲ್ಲಿ ಪಾಲ್ಗೊಂಡು ಮಧ್ಯಮದೊಂದಿಗೆ ಮಾತನಾಡಿದ್ದಾರೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾಯಕಯೋಗಿ ಪವಾಡಪುರುಷ ಮಾಡಿದವರಿಗೆ ನೀಡು ಭಿಕ್ಷೆ ಎನ್ನುವಂತೆ ಕಾಯಕವೇ ಕೈಲಾಸ ತತ್ವವನ್ನು ಸಾರಿದಂತವರು ಪ್ರತಿ ವರ್ಷವೂ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಬಂದಂತ ಭಕ್ತರಿಗೆ ನಮ್ಮ ಕುಟುಂಬದವತಿಯಿಂದ ಅನ್ನಸಂತರ್ಪಣೆಯ ಕಾರ್ಯವು ನಡೆಯುತ್ತಾ ಬಂದಿದೆ ಆದ್ದರಿಂದ ಇಂದು ಸಹ ಸುಮಾರು ಹತ್ತರಿಂದ ಹದಿನೈದು ಸಾವಿರ ಭಕ್ತರಿಗೆ ಅನ್ನದಾಸೋಹ ನಡೆಸಲಾಯಿತು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಸುನೀತಾ ಜಿ ಬಿ ಮುದಿಯಪ್ಪ, ಮುಖಂಡ ಎಸ್ ಎನ್ .ತಿಪ್ಪೇಸ್ವಾಮಿ, ಕೆ ಜಿ ಪ್ರಕಾಶ್ ಕುದಾಪುರ, ಜೈಯಣ್ಣ ತಿಪ್ಪೇಸ್ವಾಮಿ ಹಿರೇಹಳ್ಳಿ, ಜಿ ಸಿ ಶ್ರೀನಿವಾಸ್ ಕುದಾಪುರ,ಛೇರ್ಮನ್ ತಿಪ್ಪೇಸ್ವಾಮಿ, ಸೇರಿದಂತೆ ಅನೇಕರು ಇದ್ದರು