ಚಳ್ಳಕೆರೆ : ಕಾಡುಗೊಲ್ಲರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸರಕಾರ ಮೀನಾಮೇಶ ಮಾಡುತ್ತಿದೆ ಇದರಿಂದ ಮುಂಬರುವ 2023ರ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಕಾಡು ಗೊಲ್ಲರ ತಾಲೂಕು ಅಧ್ಯಕ್ಷ ರಾಜಣ್ಣ ಸರಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದೇವರು ಕೊಟ್ಟರು ಪೂಜಾರಿ ಕೊಡದ ರೀತಿಯಲ್ಲಿ ಅಧಿಕಾರಿಗಳು ವರ್ತನೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು
ಸರಕಾರದ ಆದೇಶವಿದ್ದರೂ ಅಧಿಕಾರಿಗಳು ಕಾಡುಗೊಲ್ಲ ಪ್ರಮಾಣ ಪತ್ರ ನೀಡಲು ನಿರ್ಲಕ್ಷವಹಿಸುತ್ತಿದ್ದಾರೆ ಇದೇ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಪ್ರಮಾಣ ಪತ್ರ ನೀಡಿದ್ದಾರೆ ಆದರೆ ನಮ್ಮ ಚಳ್ಳಕೆರೆಯಲ್ಲಿ ತಹಶೀಲ್ದಾರ್ ನೀಡುತ್ತಿಲ್ಲ, ಸರಕಾರದ ಆದೇಶವನ್ನು ಉಲ್ಲಂಘನೆ ಮಾಡುವ ಮೂಲಕ ಕಾಡುಕೊಲ್ಲ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದರು.
ಮಾಜಿ ಜಿಪಂ ಅಧ್ಯಕ್ಷ ರವಿಕುಮಾರ್ ಮಾತನಾಡಿ ಕಾಡುಗೊಲ್ಲರ ಮತಗಳನ್ನು ಪಡೆಯಲು ಮುಖ್ಯ ಮಂತ್ರಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿ ಶಿರಾ ತಾಲೂಕಿನ ಉಪಚುನಾವಣೆ ಸಂದರ್ಭದಲ್ಲಿ ಭರವಸೆಯನ್ನು ನೀಡಿದ್ದರು ಆದರೆ ಚುನಾವಣೆಯ ಒಳಗೆ ಕಾಡುಗೊಲ್ಲರ ಬೇಡಿಕೆಗಳನ್ನು ಹೀಡೇರಿಸದಿದ್ದರೆ ರಾಜ್ಯಾದ್ಯಾಂತ ಉಗ್ರವಾದ ಪ್ರತಿಭಟನೆ ನಡೆಸುವ ಮೂಲಕ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಕಿಡಿಕಾರಿದರು.
ಸಿದ್ದಪುರ ಮಂಜುನಾಥ್, ಚಂದ್ರಣ್ಣ, ಮಾತನಾಡಿ ಕೂಡಲೇ ಕಾಡುಗೊಲ್ಲ ಸಮಾಜವನ್ನು ಎಸ್ಟಿಗೆ ಸೇರಿಸಬೇಕು. ಕಾಡು ಗೊಲ್ಲ ಸಮುದಾಯದ ಮಕ್ಕಳಿಗೆ ಶೈಕ್ಷಣಿಕವಾಗಿ ಜಾತಿ ಪ್ರಮಾಣ ಪತ್ರ ನೀಡಬೇಕು ಈ ಎಲ್ಲಾ ಬೇಡಿಕೆಗಳು ಅತೀ ಶೀಘ್ರದಲ್ಲಿ ಪೂರೈಯಿಸಬೇಕು, ನಮ್ಮ ಸಮುದಾಯಕ್ಕೆ ಸಿದ್ದರಾಮಯ್ಯ ಸರಕಾರ ಇರುವಾಗ ಮಾತ್ರ ಒಂದು ಸ್ಥಾನ ಎಂಎಲ್‌ಸಿ ಕೊಟ್ಟಿದ್ದು ಬಿಟ್ಟರೆ ಮತ್ತೆ ಎಲ್ಲಿಯು ಇಲ್ಲ, ತಾಲೂಕಿನಲ್ಲಿ ಸುಮಾರು 135 ಹಟ್ಟಿಗಳು ಇವೆ, ಮುಂಬರುವ ವಿಧಾನಸಭೆ ಚುನಾವಣೆ ಕ್ಷೇತ್ರಗಲ್ಲಿ ಕಾಡುಗೊಲ್ಲ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಲು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ರಂಗಸ್ವಾಮಿ, ಅಜ್ಜಣ್ಣ, ನಾಗರಾಜ, ವೀರಣ್ಣ, ಬೂದಿಹಳ್ಳಿ ರಾಜಣ್ಣ ಸಮಾಜದ ತಾಪಂ ಮಾಜಿ ಅಧ್ಯಕ್ಷ ಜಿ.ಟಿ.ನಾಗರಾಜ್, ಅಜ್ಜಣ್ಣ, ಸಿದ್ದಾಪುರ ಮಂಜುನಾಥ್, ಇನ್ನು ಇತರರು ಪಾಲ್ಗೊಂಡಿದ್ದರು

