ಚಳ್ಳಕೆರೆ : ಮಹಿಳೆಯರು ಎಲ್ಲಾ ಹಂತದಲ್ಲಿ ಮುಖ್ಯವಾಹಿನಿಗೆ ಬರಬೇಕು, ಸ್ವಾತಂತ್ರ‍್ಯ ಪೂರ್ವದಲ್ಲಿ ಕೂಡ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕಾಗಿ ನಿರಂತರ ಹೋರಾಟ ನಡೆಯುತ್ತಲೆ ಇವೆ ಆದ್ದರಿಂದ ಮಹಿಳೆ ಅಬಲೆ ಅಲ್ಲ, ಅವಳು ಸಬಲೆ ಎಂಬುದು ಮನಗಾಣಬೇಕು ಎಂದು ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಯಾನಂದ್ ಪ್ರಹ್ಲಾದ್ ಹೇಳಿದ್ದಾರೆ.
ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೀ ಕನ್ನಡ ವಾಹಿನಿವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಮಹಿಳೆ ಭಾರತೀಯ ಪ್ರಾಚೀನ ಕಾಲದಿಂದ ಇಂದಿನ ವರೆಗೆ ಭಾರತದ ಅನಿಷ್ಟ ಪದ್ಧತಿಗಳ ಬಾಲ್ಯವಿವಾಹ, ಸತಿಸಹಗಮನ ಪದ್ದತಿ ಈಗೇ ಹಲವು ಪಿಡುಗುಗಳು ದೊಡ್ಡ ಪಿಡುಗಾಗಿ ಪರಿಣಮಿಸಿ ಇಂದು ಮಹಿಳೆ ಅರ್ಥಿಕವಾಗಿ ಪರಾವಲಂಬಿಯಾಗಿದ್ದಾಳೆ. ರಾಜಕೀಯವಾಗಿ ಮಹಿಳೆ ಬರಬೇಕು ಪುರಷ ಪ್ರಧಾನ ರಾಷ್ಟ್ರದಲ್ಲಿ ಮೊಟ್ಟಮೊದಲ ಸಿಡಿದೆದ್ದ ಮಹಿಳೆ ಅಕ್ಕಮಹಾದೇವಿಯರು ಪ್ರಪಂಚದಲ್ಲಿ ಮೊದಲು ದಣಿಸಿದವರು ಅಕ್ಕಮಹದೇವಿ ಎನ್ನಬಹುದು ಎಂದರು.
ಇನ್ನೂ ಜೀ ಕನ್ನಡ ವಾಹಿನಿಯ ಮ್ಯಾನೇಜರ್ ಮಹಮ್ಮದ್ ಆಲಿ ಮಾತನಾಡಿ, ಮಹಿಳೆ ಯಾವುದೇ ಕೆಲಸದಲ್ಲಿ ಕ್ರೀಯಾ ಶೀಲವಾಗಿರುತ್ತಾಳೆ, ಮಹಿಳೆ ಸಮಾಜದಲ್ಲಿ ಅಗ್ರಸ್ಥಾನ ಪಡೆಯಬೇಕು, ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತ ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಈಡೀ ಸಮಾಜವನ್ನು ಮಹಿಳೆ ಜಾಗೃತಿ ಗೊಳಿಸಬೇಕು, ಮಾತೃತ್ವ ಪ್ರಧಾನವಾದ ದೇಶವಾಗಬೇಕು ಮಹಿಳೆಯರು ಸಹಕಾರ, ಸಹೃದಯಿ, ಅರ್ಥವನ್ನು ಹೊಂದಿದ ಮಹಾತಾಯಿ ಎಂದರು.
ಇನ್ನೂ ಮಹಿಳಾ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಕಿಯರಿಗೆ ಲೆಮೆನ್‌ನಿಂದಸ್ಪೂನ್ ಆಟ, ಚೆಂಡು ಎಸೆತ, ಮಹಿಳಾ ಮಣಿಗಳಿಂದ ಪದ ಜೊಡಣೆ ಈಗೇ ವಿವಿಧ ಆಟಗಳನ್ನು ಆಡಿಸುವುದರ ಮೂಲಕ ಜೀ ಕನ್ನಡ ವಾಹಿನಿಯ ವಿಶೇಷ ಕಾರ್ಯಕ್ರಮ ಕಳೆಗಟ್ಟಿದೆ.

ಈದೇ ಸಂಧರ್ಭದಲ್ಲಿ ಸಂಸ್ಥೆಯ ಡಿಎನ್.ಶಿವಪ್ರಸಾದ್, ಮಧುಕುಮಾರ್, ಶಿಕ್ಷಕಿ ಶೈಲಜಾ, ಶೋಭಾ, ಪ್ರಸಾದ್, ಇತರು ಶಿಕ್ಷಕ ವೃಂಧದವರು ಪಾಲ್ಗೋಂಡಿದ್ದರು.

About The Author

Namma Challakere Local News
error: Content is protected !!