ಚಳ್ಳಕೆರೆ : ಚುನಾವಣೆಗೆ ಕೇವಲ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಆಯಿಲ್ ಸಿಟಿಯಲ್ಲಿ ರಾಜಾಕೀಯ ರಂಗೇರಿದ್ದು ಮೂರು ಪಕ್ಷಗಳಿಂದ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.
ಅದರಂತೆ ಈಗಾಗಲೇ ಕಳೆದ ಐದು ವರ್ಷಗಳಿಂದ ಮತದಾರರ ಮನಸ್ಸಲ್ಲಿ ಮನೆ ಮಾಡಿದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕಳೆದ 2018ರಲ್ಲಿ ಕಡಿಮೆ ಅಂತರದಲ್ಲಿ ಅವಕಾಶ ಕಳೆದುಕೊಂಡಿದ್ದ ರವೀಶ್ ಈ ಭಾರಿ ಗೆಲುವಿಗಾಗಿ ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ಭರ್ಜರಿಯಾಗಿ ರೌಂಡ್ಸ್ ಹೊಡಿಯುತ್ತಿದ್ದಾರೆ.
ಅದರಂತೆ ಈಡೀ ಕ್ಷೇತ್ರದಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತ ನೋಡಿ ಪ್ರಾದೇಶಿಕ ಪಕ್ಷ ಜೆಡಿಎಸ್ ಈ ಬಾರಿ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.
ಅದರಂತೆ ತಾಲೂಕಿನಗೊರ‍್ಲಕಟ್ಟೆಗ್ರಾಮದಲ್ಲಿ ಅನೇಕ ಮುಖಂಡರು ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷವನ್ನು ತೊರೆದು ಜೆ.ಡಿ.ಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಸೇರ್ಪಡೆಗೊಡರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಜೆ.ಡಿ.ಎಸ್ ಅದ್ಯಕ್ಷರು ಪಿ. ಟಿ. ತಿಪ್ಪೇಸ್ವಾಮಿ ಹಾಗೂ ಆನಂದಪ್ಪ (ಹೆಗ್ಗೆರೆ) ಹಲವು ಮುಖಂಡರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!