ಚಳ್ಳಕೆರೆ : ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕುಂಬಾರ ಸಮುದಾಯದವತಿಯಿಂದ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.
16ನೇ ಶತಮಾನದಲ್ಲಿ ಈಡೀ ಸಮಾಜದಲ್ಲಿನ ಮೌಡ್ಯತೆ, ಅಂಕು-ಡೊAಕುಗಳನ್ನು ತಮ್ಮ ತ್ರಿಪದಿಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ ಅವರು ಹಾಡಿದ ತ್ರಿಪದಿ ಸಾಲುಗಳು ಇಂದು ಜನಮಾನಸದಲ್ಲಿ ಉಳಿದಿವೆ, ಕವಿ ಸರ್ವಜ್ಞ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಏಳಿಗೆಗಾಗಿ ಸರ್ವಜ್ಞರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಮನುಷ್ಯರಾಗಲು ಸಾಧ್ಯ ಎಂದು ತಿಳಿಸಿದರು.
ಇನ್ನೂ ಶ್ರೀ ಬಸವ ಕುಂಬಾರ ಮೂರ್ತಿ ಸ್ವಾಮೀಜಿ ಮಾತನಾಡಿ ವಚನಗಳ ಸತ್ವದ ಮೂಲಕ ಸಮಾಜದ ಮೂಢನಂಬಿಕೆ ತೊಡೆದು ಹಾಕುವ ನಿಟ್ಟಿನಲ್ಲಿ ಸರ್ವಜ್ಞರ ತ್ರಿಪದಿಗಳು ಕನ್ನಡದ ಅತ್ಯಂತ ಜನಪ್ರೀಯ ವಚನಗಳಾಗಿ ಇಂದಿಗೂ ಪ್ರಸ್ತುತ. ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶಾಸಕರು ಮುಂದಿನ ದಿನಗಳಲ್ಲಿ ಧ್ವನಿ ಎತ್ತಬೇಕು ಸತ್ಯನಿಷ್ಠುರವಾದ ವ್ಯಕ್ತಿತ್ವ, ಅಗಾಧ ಪಾಂಡಿತ್ಯ, ಅಪಾರ ಜೀವನಾನುಭವವುಳ್ಳ ಸಂತ ಸರ್ವಜ್ಞ ರಂತೆ 2023ಕ್ಕೆ ಮತ್ತೊಮ್ಮೆ ಶಾಸಕರು ಹಾಗುವುದು ಶತ ಸಿದ್ದ ಎಂದರು.
ತಹಶೀಲ್ದಾರ್ ರೇಹಾನ್ ಪಾಷಾ ಮಾತನಾಡಿ ಇಡೀ ತಳ ಸಮುದಾಯದ ಧ್ವನಿಯಾದ ಸರ್ವಜ್ಞ, ಸರಳ ಭಾಷೆಯಲ್ಲಿ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ. ಅನ್ಯರಿಗೆ ಟೀಕೆ, ಟಿಪ್ಪಣಿ, ನಿಂದನೆ ಅನುಸರಿಸದೇ ಸಾಹಿತ್ಯದ ಮೂಲಕ ಅಂದಿನ ವಚನಕಾರರು ತಮ್ಮ ಕಾಯಕದೊಂದಿಗೆ ವಚನಗಳ ಮೂಲಕ ತಮ್ಮ ಜೀವನವನ್ನು ಸಮಾಜದ ಉದ್ಧಾರಕ್ಕಾಗಿ ಮೀಸಲಿಟ್ಟು ಹಗಲಿರುಳು ಶ್ರಮಿಸಿದರೆ ಎಂದು ತಿಳಿಸಿದರು.
ಸಮುದಾಯದ ಗೋವಿಂದರಾಜ್ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಕುಂಬಾರ ಸಮುದಾಯ ಹಿಂದುಳಿದಿದ್ದು ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಧರಣಿ ನಡೆಸಿ ಬೇಡಿಕೆ ಸಲ್ಲಿಸಿದ್ದರೂ ಸಹ ಸರಕಾರ ನಿಗಮ ಸ್ಥಾಪನೆಗೆ ಮುಂದಾಗುತ್ತಿಲ್ಲ ಕೂಡಲೆ ರಾಜ್ಯದ ಶಾಸಕರು ಸರಕಾರಕ್ಕೆ ಒತ್ತಡ ಹಾಕುವ ಮೂಲಕ ಕುಂಬಾರ ಅಭಿವೃದ್ಧಿನಿಗಮ ಸ್ಥಾಪನೆಗೆ ಮುಂದಾಗ ಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಕವಿತಾ. ಮುಷ್ಟೂರಲಿಂಗಪ್ಪ, ತಿಪ್ಪೇಸ್ವಾಮಿ, ಗೋವಿಂದರಾಜ್ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಚಳ್ಳಕೆರೆಪ್ಪ, ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುಂಬಾರ ಸಮುದಾಯದ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.