ರಾಮಾಂಜನೇಯ ಕೆ.ಚನ್ನಗಾನಹಳ್ಳಿ

ಚಳ್ಳಕೆರೆ : ರೇಷ್ಮೆ ನಗರಿ ಮೊಳಕಾಲ್ಮೂರಿನಲ್ಲಿ ರಾಜಕೀಯ ರಂಗೇರಿದ್ದು ದಿನದಿಂದ ದಿನಕ್ಕೆ ಚುನಾವಣೆ ಕಾವು ಹೊಸ ತಿರುವು ಪಡೆಯುತ್ತಿದೆ.
ಬುಡಕಟ್ಟು ಜನಾಂಗವೇ ಹೆಚ್ಚಾಗಿರುವ ಮಧ್ಯಕರ್ನಾಟಕದ ಭಾಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅತೀ ಹಿಂದೂಳಿದ ತಾಲೂಕು ಇಂತಹ ಬಯಲು ಸೀಮೆ ಕ್ಷೇತ್ರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಮಾಮೂಲು ಆದರೆ ಬದ್ಧ ವೈರಿ, ಎದುರಾಳಿ 2018ರಲ್ಲಿ ಟಿಕೆಟ್ ತಪ್ಪಿಸಿದ್ದ ಬಿ.ಶ್ರೀರಾಮುಲು 2023ಕ್ಕೆ ಟಿಕೆಟ್ ನೀಡಲು ಮುಂದಾಗಿರುವುದು ಕ್ಷೇತ್ರದ ಜನರನ್ನು ಹುಬ್ಬೆರಿಸುವಂತೆ ಮಾಡಿದೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಗೆ ಗುಡ್ ಬಾಯ್ ಹೇಳಿ ಕಮಲವನ್ನು ಅಪ್ಪಿಕೊಂಡ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ನಾಯಕನಹಟ್ಟಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ
ಸಚಿವ ಬಿ.ಶ್ರೀರಾಮುಲು ಕಡು ರಾಜಕೀಯ ವಿರೋಧಿ ಎಂಬ ಮಾತು ಈಡೀ ಕ್ಷೇತ್ರದಲ್ಲಿ ಜನಜನಿತವಾಗಿದೆ ಆದರೆ ಇಂದು ಶ್ರೀರಾಮುಲು ತಾವೇ ಸ್ವತಃ ಮಾಜಿ ಶಾಸಕರ ಮನೆಗೆ ಬಂದು ಪಕ್ಷಕ್ಕೆ ಸೆರ್ಪಡೆ ಮಾಡಿ ಟಿಕೆಟ್ ಭರವಸೆ ನೀಡಿರುವುದು ಎದುರಾಳಿ ಪಕ್ಷದಲ್ಲಿ ನಡುಕ ಉಂಟುಮಾಡಿದೆ.
ಭಾನುವಾರ ನಾಯಕನಹಟ್ಟಿ ಬಿಜೆಪಿ ಮಂಡಲ ಕಚೇರಿಯಲ್ಲಿ ಎಸ್.ತಿಪ್ಪೇಸ್ವಾಮಿ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದAತಾಗಿದ್ದು ಇನ್ನೂ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಾಂತಾಗಿದೆ.
ರಣತAತ್ರಗಾರಿಕೆ ಮೊಳಕಾಲ್ಮೂರು ಕ್ಷೇತ್ರ :
ಕಳೆದ ಹಲವು ದಿನಗಳಿಂದ ತೆರೆಮರೆಯಲ್ಲಿ ಕಸರತ್ತು ನಡೆಸಿದ ಜಿಲ್ಲೆಯ ದುರೀಣ ರಾಜಾಕರಣಿ ಎಂದೇ ಎನಿಸಿಕೊಂಡಿರುವ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಈಡೀ ಜಿಲ್ಲೆಯನ್ನು ಕೇಸರಿಮಯ ಮಾಡಲು ಈಗಾಲೇ ರಣತಂತ್ರ ಹೂಡಿದ್ದಾರೆ ಅದರಂತೆ ಮೊದಲಿಗೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಲಗ್ಗೆಹಿಟ್ಟ ಬಿಜೆಪಿ ನಾಯಕರು ಕ್ಷೇತ್ರದ ಮತದಾರರು ಯಾರ ಪರ ನಿಲ್ಲುವರೋ ಎಂಬುದು ಸಾಕ್ಷೀಕರಿಸಿ ಅವರಿಗೆ ಮಣಿ ಹಾಕುವ ನಿಟ್ಟಿನಲ್ಲಿ ಕಲ್ಲಿನ ಕೋಟೆಯಲ್ಲಿ ಪಾರುಪತ್ಯ ಸಾಧಿಸಲು ರಣತಂತ್ರ ಎಣಿದಿದ್ದಾರೆ. ಅದರಂತೆ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿಗೆ ಟಿಕೆಸ್ ನೀಡುವ ಭರವಸೆ ನೀಡಿ ಕಾಂಗ್ರೇಸ್ ನಿಂದ ಬಿಜೆಪಿಗೆ ಭರಮಾಡಿಕೊಂಡಿದ್ದಾರೆ.
ಆಯಿಲ್ ಸಿಟಿಯ ತೆಕ್ಕೆಗೆ ಕಲ್ಲಿನಕೋಟೆಯ ನಾಯಕರ ರಣತಂತ್ರ :
ಅದರಂತೆ ಆಯಿಲ್ ಸಿಟಿ ಚಳ್ಳಕೆರೆಯಲ್ಲಿ ಈಗಾಲೇ ಕಳೆದ ಎರಡು ಬಾರಿ ಕೈ ವಶದಲ್ಲಿ ಇರುವ ಆಯಿಲ್ ಸಿಟಿಯನ್ನು ಹೇಗಾದರೂ ಮಾಡಿ ಕೇಸರಿಮಯ ಮಾಡಲು ಕಳೆದ ಎರಡು ಬಾರಿ ನಾಯಕರು ಪ್ರಯತ್ನ ವಿಫಲರಾಗಿದೆ, ಆದರೆ 2023ರ ಚುನಾವಣೆಯಲ್ಲಿ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಆಯಿಲ್‌ಸಿಟಿ ಅದಿಪತ್ಯಕ್ಕೆ ಸೂಕ್ತ ಅಭ್ಯರ್ಥಿಗೆ ಕೇಸರಿ ಪಾಳಯದ ನಾಯಕರು ಮಣೆ ಹಾಕುತ್ತಿದ್ದಾರೆ ಅದರಂತೆ ಈಗಾಗಲೇ ಅಧಿಕಾರಿಯೊಬ್ಬರನ್ನು ಪಿಕ್ಸ್ ಮಾಡಿರುವುದು ಕ್ಷೇತ್ರದ ಜನತೆಗೆ ತಿಳಿದಿರುವ ವಿಷಯ ಇನ್ನೂ ಪಕ್ಷೇತರ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ಕೆಟಿ.ಕುಮಾರಸ್ವಾಮಿ ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಈಗೇ ಕಲ್ಲಿನ ಕೋಟೆಯ ಕೇಸರಿ ಪಡೆಯ ನಾಯಕರು ಆಯಿಲ್ ಸಿಟಿ ಮೇಲೆ ಕಣ್ಣಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಇನ್ನೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ನಾಯಕನಹಟ್ಟಿ ಮಂಡಲದ ಅಧ್ಯಕ್ಷ ಈ.ರಾಮರೆಡ್ಡಿ, ಮೊಳಕಾಲ್ಮೂರು ಮಂಡಲದ ಅಧ್ಯಕ್ಷ ಮಂಜುನಾಥ ಸೇರಿದಂತೆ ಮುಂತಾದ ಮುಖಂಡರು ಇದ್ದರು.

Namma Challakere Local News
error: Content is protected !!