ನಾಯಕನಹಟ್ಟಿ:: ಬರದ ನಾಡು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಎಂಬುದು ಶುನ್ಯವಾಗಿದೆ ಎಂದು ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ ವೈ ಸುಜಯ್ ಹೇಳಿದ್ದಾರೆ.
ಅವರು ಪಟ್ಟಣದ ಐದನೇ ವಾರ್ಡಿನ ಪ್ರಿಯದರ್ಶಿನಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ.
ಶಿಕ್ಷಣವೆಂಬುದು ಹುಲಿಯ ಹಾಲಿ ಇದ್ದಂತೆ ಅದನ್ನು ಕುಡಿದವರು ಗರ್ಜಿಸಲೇಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ನಮಗೆ ನೀಡಿದ್ದಾರೆ ಪ್ರತಿಯೊಬ್ಬ ವಿದ್ಯಾರ್ಥಿಯು ಹೆತ್ತವರಿಗೆ ಕೀರ್ತಿ ತರುವಾಗಿ ಶಿಕ್ಷಣವನ್ನ ಪಡೆಯಬೇಕು ಎಂದು ತಿಳಿಸಿದರು.
ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಮಾತನಾಡಿ ನಮ್ಮ ಪಟ್ಟಣದ 5ನೇ ವಾರ್ಡಿನಲ್ಲಿ ಕಡು ಬಡತನದಲ್ಲಿ ಜೀವಿಸುವವರ ಸಂಖ್ಯೆ ಹೆಚ್ಚು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನನ್ನ ವೈಯಕ್ತಿಕವಾಗಿ ಶಾಲೆಯ ಸಮವಸ್ತ್ರ ಕೊಡಿಸುವುದಾಗಿ ಸಭೆಯಲ್ಲಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸುನೀತಾ ಜಿ ಬಿ ಮುದಿಯಪ್ಪ, ಪಟ್ಟಣ ಪಂಚಾಯತಿ ಸದಸ್ಯ ಓಬಯ್ಯ ದಾಸ್, ಎಸ್ ಎನ್ ತಿಪ್ಪೇಸ್ವಾಮಿ, ಪ್ರಿಯದರ್ಶಿನಿ ಶಾಲೆಯ ಕಾರ್ಯದರ್ಶಿಗಳಾದ ಬೋರಸ್ವಾಮಿ, ಉಮಾ ಬೋರಸ್ವಾಮಿ ,ಕೆ. ಜಿ. ಪ್ರಕಾಶ್ ಕುದಾಪುರ, ಎನ್ ದೇವರಹಳ್ಳಿ ರಾಜಣ್ಣ, ಜಯರಾಮ್ ಹೊನ್ನೂರ್, ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಎಸ್ ಮಹಾಂತೇಶ್, ಜಯಣ್ಣ ಹನುಮಂತನಹಳ್ಳಿ, ಗೌರಸಮುದ್ರ ಮಾರಣ್ಣ ವಕೀಲ ನಾಗೇಂದ್ರಪ್ಪ, ಗುಂತಕೋಲಮ್ಮನಹಳ್ಳಿ ಮಲ್ಲಿಕಾರ್ಜುನ್, ಪ್ರಿಯದರ್ಶಿನಿ ಶಾಲೆಯ ಮುಖ್ಯ ಶಿಕ್ಷಕರದ ಸುರೇಶ್, ಜಂಪಣ್ಣ, ಡಾನ್ ಬಾಸ್ಕೋ ಶಾಲೆಯ ಮುಖ್ಯ ಶಿಕ್ಷಕರಾದ ಪಾಲಯ್ಯ, ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಮುಂತಾದವರು ಇದ್ದರು