ನಾಯಕನಹಟ್ಟಿ:: ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಜನರ ಮೂಗಿಗೆ ತುಪ್ಪ ಸವ ಕೆಲಸ ಮಾಡುತ್ತೇವೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಟಿ ವೀರಭದ್ರಪ್ಪ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಸಮೀಪದ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಕೆರೆ ಕಾವಲ್ ನಲ್ಲಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಚೌಡೇಶ್ವರಿ ದೇವಿಯ ಆಶೀರ್ವಾದ ಪಡೆದು ಗ್ರಾಮದ ಮುಖಂಡರೊಂದಿಗೆ ಜೆಡಿಎಸ್ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರು ಹಲವಾರು ಜನಪರ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ಇಂದಿಗೂ ಶಾಶ್ವತವಾಗಿ ಜೆಡಿಎಸ್ ಪಕ್ಷವನ್ನ ಜನರು ಒಪ್ಪುತ್ತಾರೆ ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಆದ್ದರಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದ್ದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರು ಅಷ್ಟು ಸತ್ಯ ಎಂದು ಟಿ. ವೀರಭದ್ರಪ್ಪ ಹೇಳಿದ್ದಾರೆ.

ಇದೇ ವೇಳೆ ತಾಲೂಕು ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಡಿ ಬಿ ಕರಿಬಸಪ್ಪ, ತಾಲೂಕು ಉಪಾಧ್ಯಕ್ಷ ಸಳ್ಳೆಗೌಡ ಮಲ್ಲೂರಹಳ್ಳಿ, ಮಲ್ಲೂರಹಳ್ಳಿ ತಿಪ್ಪೇಸ್ವಾಮಿ. ಗ್ರಾಮದ ಮುಖಂಡರಾದ , ಬೆಳಗಟ್ಟ ಕಾಟಯ್ಯ, ಮೂಗಿನ ಬೋರಜ್ಜ ,ನಾಗರಾಜಪ್ಪ, ಅಂಗಡಿ ಮಲ್ಲಯ್ಯ, ಗೋಡೆ ಮಲ್ಲಯ್ಯ, ದೊಡ್ಡಮನೆ ಚೆನ್ನಕೇಶವಯ್ಯ, ಮುದ್ದಲು ಮುತ್ತಪ್ಪ ಬಿ ಓ ಜಯಣ್ಣ, ಸಂಚಲಯ್ಯ, ಸರ್ಪಭೂಷಣ, ಗೌಡ್ರು ಜಿ ಸಿ ಬೋರಯ್ಯ , ಬರಗಲು ಕ್ಯಾಸಯ್ಯ, ಅಜ್ಜನ ಓಬಯ್ಯ, ಬೆಳಗಟ್ಟ ನಾಗೇಶ್ ಟಿಪ್ಪುಸಾಬ್, ಆಟೋ ಓಬಯ್ಯ ಮೂಗಿನ ಸಣ್ಣ ಬೋರಯ್ಯ, ಇನ್ನು ಮುಂತಾದವರು ಇದ್ದರು

About The Author

Namma Challakere Local News
error: Content is protected !!