ಚಳ್ಳಕೆರೆ : ಈಡೀ ಪ್ರಪಂಚದ ಮೂಲೆ ಮೂಲೆಗೆ ಹೋದರು ಒಂದೇ ಭಾಷೆಯನ್ನು ಮಾತನಾಡುವ ಏಕೈಕ ಸಮುದಾಯ ಎಂದರೆ ಅದು ಬಂಜಾರ ಸಮುದಾಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು, ಚಿತ್ರದುರ್ಗ ಜಿಲ್ಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳಿಗೆ ಹಿಡಿದ ಕೈಗಡಿಯಾಗಿದೆ, ಈ ಭಾಗದಲ್ಲಿರುವಂತಹ ಬುಡಕಟ್ಟು ಸಂಸ್ಕೃತಿಗಳು ಬಂಜಾರ ಜನಾಂಗದ ವೈವಿಧ್ಯಮಯವಾದಂತಹ ಬದುಕು ಸಮಾಜದ ವೈಶಿಷ್ಟ್ಯತೆಗೆ ದಾರಿ ದೀಪವಾಗಿದೆ, ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಶೈಕ್ಷಣಿಕವಾಗಿ ಮುಂದೆ ಬನ್ನಿ ಎಂದರು.
ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮಾಡಿನಾಡಿ, ಶೈಕ್ಷಣಿಕವಾಗಿ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಾಗಿದೆ ಜನಾಂಗದ ಪ್ರತಿ ಕುಟುಂಬದಲ್ಲಿ ಮಕ್ಕಳಿಗೆ ಅಗತ್ಯವಾಗಿ ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಒದಗಿಸಬೇಕಾಗಿದೆ ಇದರಿಂದ ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳಲು ಸಹಕಾರಿಯಾಗುವುದು ಗ್ರಾಮದಲ್ಲಿ ಸ್ವಾವಲಂಬನೆಯನ್ನು ಕೂಡ ಹೊಂದಲು ಸಾಧ್ಯವಾಗುತ್ತದೆ. ಸಂತ ಸೇವಾಲಾಲ್ ರವರು ಬಂಜಾರ ಜನಾಂಗದ ಸಾಮಾಜಿಕ ಜನಜೀವನದ ಬದಲಾವಣೆಗೆ ದಾರಿದೀಪವಾದಂತವರು ಇವರ ಆದರ್ಶಗಳನ್ನು ಎಲ್ಲ ಜನಾಂಗದವರು ಮೈಗೂಡಿಸಿಕೊಳ್ಳಬೇಕು ಎಂದರು.

ಇನ್ನೂ ಉಪನ್ಯಾಸ ನೀಡಿದ ಚಂದ್ರನಾಯ್ಕ್ ಮಾತನಾಡಿ, ಸಂತ ಸೇವಾ ಲಾಲ್ ಹುಟ್ಟಿದ ಆ ಕ್ಷಣ ಈಡೀ ಭೂಮಿ ಹಸಿರಾಗಿತ್ತು ಎಂದು ಇತಿಹಾಸದ ಕುರುವು ಇದೆ. ಆದರಂತೆ ಈಡೀ ರಾಜ್ಯದಲ್ಲಿ ದೇಶದಲ್ಲಿ ಲಂಬಾಣಿ ಸಮುದಾಯ ತನ್ನದೇ ಆದ ಅಸ್ತಿತ್ವ ಹೊಂದಿದೆ ಅದರಂತೆ ಎಲ್ಲಾರೂ ಶಿಕ್ಷಣ ಪಡೆಯಬೇಕು ಎಂದರು.

ಚಳ್ಳಕೆರೆಮ್ಮ ದೇವಾಸ್ಥಾನದಿಂದ ಬೆಳ್ಳಿ ಸಾರೋಟದಲ್ಲಿ ಸಂತ ಸೇವಾಲಾಲ್ ಭಾವಚಿತ್ರ ಮೆರವಣೆಗೆ ಪ್ರಾರಂಭವಾಗಿ ಬಿಎಂಜಿಹೆಚ್‌ಎಸ್ ಶಾಲಾ ಮೈದಾನಕ್ಕೆ ಆಗಮಿಸಿತು ದಾರಿಯುದ್ದಕ್ಕೂ ವಿವಿಧ ಕಾಲಾ ತಂಡಗಳು ಹಾಗೂ ಡಿಜೆ ಸದ್ದಿಗೆ ಮಹಿಳಾ ಮಣಿಗಳು ಹೆಜ್ಜೆ ಹಾಕಿದರು, ಇನ್ನೂ ಶಾಸಕ ಟಿ.ರಘುಮೂರ್ತಿ, ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್, ತಹಶೀಲ್ದಾರ್ ಎನ್.ರಘುಮೂರ್ತಿ, ಕೆ.ಟಿ.ಕುಮಾರ್‌ಸ್ವಾಮಿ, ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.

ಈದೇ ಸಂಧರ್ಭದಲ್ಲಿ ಶ್ರೀ ಶಿವಸಾಧು ಸ್ವಾಮೀಜಿ, ಗೀತಸಾರ ಶ್ರೀದೇನಾಭಗತ್ ಸ್ವಾಮೀಜೀ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಕೆ.ವೀರಭದ್ರಯ್ಯ, ದಾವಣಗೆರೆ ಮಹಾನಗರ ಪಾಲಿಕೆಯ ಮೆಯರ್ ಜಯಮ್ಮ, ತಹಶೀಲ್ದಾರ್ ಎನ್.ರಘುಮೂರ್ತಿ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾಬಾಯಿ, ಪುರೋಶತ್ತಮ್ಮ, ಎಸ್.ಗೊಂವಿದ್ ನಾಯ್ಕ, ಇತರ ಪ್ರಮುಖ ಮುಖಂಡರು ಪಾಲ್ಗೋಂಡಿದ್ದರು.

About The Author

Namma Challakere Local News
error: Content is protected !!