ನಾಯಕನಹಟ್ಟಿ:: ಬಡ ಜನರ ಪಾಲಿಗೆ ಶಂಕರ್ ಕಣ್ಣಿನ ಆಸ್ಪತ್ರೆ ವರದಾನವಾಗಿದೆ ಎಂದು ಚಿತ್ರದುರ್ಗ ರೋಟರಿ ಕ್ಲಬ್ ರೋಟೋರಿಯನ್ ರೇಖಾ ಭರತ್ ಹೇಳಿದ್ದಾರೆ.
ಅವರು ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ( ರಿ) ನಾಯಕನಹಟ್ಟಿ ರೋಟರಿ ಕ್ಲಬ್ ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಜಿಲ್ಲಾ ಅಂದತ್ವ ನಿಯಂತ್ರಣ ವಿಭಾಗ ಚಿತ್ರದುರ್ಗ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಷಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ನಮ್ಮ ನಾಯಕನಹಟ್ಟಿ ಹೋಬಳಿಯ ವ್ಯಾಪ್ತಿಯಲ್ಲಿ ಅತಿ ಕಡು ಬಡವರು ಜೀವನ ನಡೆಸುತ್ತಿದ್ದು ಶಂಕರ್ ಕಣ್ಣಿನ ಆಸ್ಪತ್ರೆ ಒಂದು ಮಹತ್ವವಾದ ಕಾರ್ಯವನ್ನು ಈ ಭಾಗದ ರೋಗಿಗಳಿಗೆ ಉಚಿತ ನೇತ್ರ ತಪಾಷಣೆ ಮಾಡುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಎಂದರು .
ಒಟ್ಟಾರೆ
ಶಿಬಿರದಲ್ಲಿ ಒಟ್ಟು 150 ರೋಗಿಗಳು ಚಿಕಿತ್ಸೆ ಪಡೆದರು.
ಕಣ್ಣಿನ ಆಪರೇಷನ್ ಗೆ ಆಯ್ಕೆಯಾದವರ ಸಂಖ್ಯೆ 70
ಇದೆ ವೇಳೆ ಚಿತ್ರದುರ್ಗ ರೋಟರಿ ಕ್ಲಬ್ ಅಧ್ಯಕ್ಷ ಮಾಧುರಿ ಮಧುಪ್ರಸಾದ್, ಕಾರ್ಯದರ್ಶಿ ಜಯಶ್ರೀ, ಮಾಜಿ ಅಧ್ಯಕ್ಷ ಎಸ್ ವೀರೇಶ್. ರೋಟೋರಿಯನ್ ರೇಖಾ ಭರತ್, ಶಂಕರ್ ಆಸ್ಪತ್ರೆ ಡಾ ರವಿಕುಮಾರ್, ಡಾ ಸುಪ್ರೀತಾ ಮತ್ತು ತಂಡ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಸೇರಿದಂತೆ ಮುಂತಾದವರಿದ್ದರು