ಚಳ್ಳಕೆರೆ : ಬಯಲು ಸೀಮೆಯಲ್ಲಿ ಸಾಹಿತ್ಯದ ಕೃಷಿ ಮಾಡಲು ಇಲ್ಲಿನ ಸಾಹಿತಿಗಳ ಸಾಗರದ ದೀವಿಗೆ ಬಹು ಮುಖ್ಯವಾಗಿದೆ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಗ್ರಾಮೀಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ನೆನಪು ಮಾಸಿಕ ಕಾರ್ಯಕ್ರಮದಡಿ ಕೃಷಿ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಡಿಭಾಗದ ಗ್ರಾಮೀಣ ಭಾಗದ ರೈತರಿಗೆ ಸಾಹಿತ್ಯದ ಜೊತೆಯಲ್ಲಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರೈತರು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಮಾಹಿತಿ ಪಡೆದ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆಗಳು ಬೆಳೆಯು ಯೋಗ್ಯವಾದ ಭೂಮಿಯಾಗಿರುವುದರಿಂದ ಕಾಳು ಮೆಣಸು, ಗೋಡಂಭಿ, ದ್ರಾಕ್ಷಿ, ಡ್ರಾಗನ್ ನಂತಹ ಬೆಳೆಗಳನ್ನು ಬೆಳೆಯಬಹುದು. ಇದಕ್ಕೆ ಇಲಾಖೆಯಿಂದ ಉತ್ತೇಜ ನೀಡಲಾಗುವುದು ಎಂದು ರೈತರಿಗೆ ಕಿವಿಮಾತು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಮಾತನಾಡಿ ರೈತರು ಯಾವುದೇ ಬೆಳೆ ಬೆಳೆಯಬೇಕು. ಅದು ಉತ್ತಮ ಇಳುವರಿ ಬರಬೇಕು ಎಂದರೆ ಸಾವಯವ ಗೊಬ್ಬರವನ್ನು ಬಳಸಬೇಕು. ಸಿಕ್ಕ-ಸಿಕ್ಕ ರಾಸಾಯನಿಕ ಗೊಬ್ಬರುಗಳು ಬೆಳೆಗಳಿಗೆ ಹಾಕಿದರೆ ಅ ಬೆಳೆ ಉತ್ತಮವಾದ ಇಳುವರಿ ಬರುವುದುದಿಲ್ಲ ಎಂದು ಹೇಳಿದರು.
ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುವಾಗ ಇಲಾಖೆಯಿಂದ ಮಾಹಿತಿ ಪಡೆದು ಇಲಾಖೆ ಶಿಪಾರಸ್ಸು, ಸೂಚಿಸುವ ಗೊಬ್ಬರವನ್ನು ಹಾಕಬೇಕು. ಅಕ್ಕಪಕ್ಕ ತೋಟಗಳ ರೈತರು ರಾಸಾಯನಿಕ ಗೊಬ್ಬರಗಳನ್ನು ಹಾಕಿದ್ದಾರೆಂದು ಸಿಕ್ಕ-ಸಿಕ್ಕ ಗೊಬ್ಬರಗಳನ್ನು ಹಾಕಿ ಬೆಳೆಗಳನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು.
ಈ ವೇಳೆ ಪ್ರಗತಿಪರ ರೈತ ದಯಾನಂದಮೂರ್ತಿ,
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೆಂಜೋಚಿರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಪಿಡಿಓ ಶಶಿಕಲಾ, ರೈತರಾದ ನರಸಿಂಹಪ್ಪ, ತಿಪ್ಪೇಸ್ವಾಮಿ, ಎನ್.ಟಿ.ಓಬಣ್ಣ ಸೇರಿದಂತೆ ಇತರರಿದ್ದರು.