ಚಳ್ಳಕೆರೆ : ಇಂದಿನ ಆಧುನಿಕ ಕಾಲಗಟ್ಟದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರಾದಯಗಳು ನಶಿಸಿ ಅಳವಿನಂಚಿಗೆ ಹೋಗುತ್ತಿವೆ ಆದರೆ ನಾವು ಎಷ್ಟೆ ಪ್ರಬುದ್ದರಾದರೂ ನಮ್ಮ ನಾಡು ನುಡಿಯ ಸಂಸ್ಕೃತಿಗೆ ಬೆಲೆ ಕಟ್ಟಲಾಗದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ
ಅವರು ತಾಲೂಕಿನ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದಲ್ಲಿ ನಡೆದ ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಹಾರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ನಮ್ಮ ಆರಾಧ್ಯ ದೇವರುಗಳನ್ನು ಪೂಜಿಸುವ ಮೂಲಕ ನಾವು ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಗೋಣ, ಧಾರ್ಮಿಕ ಪರಂಪರೆ ನಾಡಗಿರುವ ಭಾರತ ಇಲ್ಲಿ ಸರ್ವ ಧರ್ಮಿಯರು ಸಮಾನತೆ ಸಾರುವ ಸಂದೇಶವಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಮುಖಂಡರಾದ ಸುಭಾಶ್‌ರೆಡ್ಡಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಮುಖಂಡ ಶುಬಾಷ್ ರೆಡ್ಡಿ, ಮುಖಂಡರು ಕಾರ್ಯಕರ್ತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.