ಚಳ್ಳಕೆರೆ : ಶಿಕ್ಷಕರ ಬೇವಾಜ್ದಾರಿಯಿಂದ ಮುಗ್ದ ಮಕ್ಕಳು ಬಿಸಿಲಿನ ತಾಪಕ್ಕೆ ಅನಾರೋಗ್ಯಕ್ಕೆ ತುತ್ತಾಗುವ ಘಟನೆ ಚಳ್ಳಕೆರೆ ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಸರಕಾರಿ ಶಾಲೆಯಲ್ಲಿ ಜರುಗಿದೆ.
ಬಯಲು ಸೀಮೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತಲಿದೆ ಆದರೆ ಸರಕಾರಿ ಶಾಲಾ ಶಿಕ್ಷಕರು ಮಾತ್ರ ಇದನ್ನು ಲೆಕ್ಕಿಸದೆ ಮುಗ್ದ ಮಕ್ಕಳನ್ನು ಗಣಿತ ಕಲಿಕಾ ಮೇಳಕ್ಕೆ ಉರಿ ಬಿಸಿಲಿನಲ್ಲಿ ತಾವು ಜೊತೆಯಲ್ಲಿರದೆ ಮಕ್ಕಳನ್ನು ಪರ‍್ಲಹಳ್ಳಿ ಗ್ರಾಮದ ಶಾಲೆಗೆ ಕಳಿಸುರುವುದು ಸಾರ್ವಜನಿಕರನ್ನು ಹುಬ್ಬೆರಿಸುವಂತೆ ಮಾಡಿದೆ.
ಇನ್ನೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ 4,5,6 ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗಣಿತ ಕಲಿಕ ಮೇಳಕ್ಕೆ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ವಾಹನಗಳ ಮೂಲಕ ಕರತಲಾಗಿತ್ತು.
ಚನ್ನಮ್ಮನಾಗತಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ4,5,6ನೇ ತರಗತಿ ಮಕ್ಕಳಿಗೆ ಶಿಕ್ಷಕರು ವಾಹನ ಸೌಲಭ್ಯ ಕಲ್ಪಿಸದೇ ಹಾಗೂ ವಿದ್ಯಾರ್ಥಿಗಳ ಜತೆಗೆ ಶಿಕ್ಷಕರಿಲ್ಲದೆ ಸುಮಾರು ನಾಲ್ಕು ಕಿ.ಮೀ ದೂರ ವಿದ್ಯಾರ್ಥಿಗಳು ಗಣೀತ ಮೇಳಕ್ಕೆ ಪುರ್ಲಹಳ್ಳಿ ಗ್ರಾಮಕ್ಕೆ ಬಿಸಿಲಿತನ ತಾಪದ ನಡುವೆ ವಿದ್ಯಾರ್ಥಿಗಳು ನಡೆದು ಕೊಂಡು ಹೋಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಹಾಗಿದೆ.
ಮಕ್ಕಳು ಉರಿ ಬೀಸಿನಲಿನಲ್ಲಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುವುದರಿಂದ ದಾರಿಯಲ್ಲಿ ಅಫಘಾತಗಳು ಸಂಭವಿಸಿದರೆ ಯಾರು ಹೊಣೆ ಎಂಬುದು ಪ್ರಜ್ಞಾವಂತ ನಾಗರೀಕರಲಿ ಯಕ್ಷ ಪ್ರಶ್ನೇಯಾಗಿದೆ. ಇನ್ನಾದರೂ ಸಂಬAಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವರಾ ಕಾದು ನೋಡಬೇಕಿದೆ.