ಚಳ್ಳಕೆರೆ : ಖಾಸಗಿ ಶಾಲೆಗಳನ್ನು ನಾಚಿಸುವಂತೆ ಸರಕಾರಿ ಶಾಲೆಗಳ ಚಿತ್ರಣ ಬದಲಿಸಿದ ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸೇವೆ ಅನನ್ಯ, ಅಂತಹ ಮಹತ್ತರವಾದ ಕಾರ್ಯ ಮಾಡಿದ ಬಯಲು ಸೀಮೆಯ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಒಂದಿಷ್ಟು ಎಲೆಮರೆಕಾಯಿಯಂತೆ ಸೇವೆ ಮಾಡಿರುವುದು ಶಾಘ್ಲನೀಯ.
ತಾಲೂಕಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಬುಡಕಟ್ಟು ಸಂಪ್ರಾದಾಯಗಳ ಒಳಗೊಂಡ ಆಯಿಲ್ ಸಿಟಿಯಲ್ಲಿ ವ್ಯಾಸಂಗಕ್ಕೆ ಹೆಚ್ಚಿನ ಒತ್ತು ನೀಡಿ, ಕೆಲವು ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗನ್ನಾಗಿ ಮಾಡಲು ಮುಂದಾಗಿರುವುದು ಸಂತಸ ತಂದಿದೆ.
ಹೌದು ಚಳ್ಳಕೆರೆ ತಾಲೂಕು ರಾಜ್ಯದಲ್ಲಿ ಭೌಗೋಳಿಕವಾಗಿ ಅತ್ಯಂತ ಎರಡನೇ ದೊಡ್ಡ ತಾಲೂಕು ಈ ತಾಲೂಕಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ಹಲವಾರು ಶಾಲೆಗಳು ದುರಸ್ತಿಗೊಂಡಿವೆ, ಆದರೆ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ಅನುದಾನದಿಂದಲೇ ಎಲ್ಲಾ ಶಾಲೆಗಳನ್ನು ದುರಸ್ತಿ ಪಡಿಸುವುದು ಕಷ್ಟಸಾಧ್ಯ,
ಸರ್ಕಾರದ ಅನುದಾನವನ್ನು ಹೊರತುಪಡಿಸಿದಂತೆ ಹಲವು ಶಾಲೆಗಳ ದುರಸ್ತಿ ನವಿಕೃತ ವಿನ್ಯಾಸ ಮಾಡುವುದು ಮತ್ತು ಉನ್ನತ ಶಿಕ್ಷಣದ ಪರಿಕಲ್ಪನೆಯ ಸ್ಮಾರ್ಟ್ ಕ್ಲಾಸ್ ಮಾಡುವುದು ಇಂತಹ ಸಾಮಾಜಿಕ ಮತ್ತು ವಿನೂತನ ಕಲ್ಪನೆಯ ಅಧಿಕಾರಿಗಳಿಗೆ ಬರುವುದು ಬಹಳ ಕಡಿಮೆ ಇಂತಹ ಶಾಲೆಗಳ ಅಭಿವೃದ್ಧಿ ಕನಸು ಕಂಡವರು ಬಹುಅಪರೂಪ.
ತಾಲೂಕಿನಲ್ಲಿ ನಾಯಕನಹಟ್ಟಿ ಮತ್ತು ತಳಕು ಹೋಬಳಿಯ 11 ಗ್ರಾಮಗಳ ಶಾಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಇವರೊಂದಿಗೆ ದತ್ತು ತೆಗೆದುಕೊಂಡು ಕುವೈತ್ ಕನ್ನಡಿಗ ಪ್ರತಿಷ್ಠಾನದಿಂದ 11ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್, ಪೀಠೋಪಕರಣಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಒಳಗೊಂಡAತ ಪರಿಕಲ್ಪನೆಯ ಯೋಜನೆಯನ್ನು ರೂಪಿಸಿ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿ, ಹಿರೇಹಳ್ಳಿ ಗೌರಸಮುದ್ರ, ಮುಂತಾದ 11ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
ಇಲ್ಲಿನ ಶಾಲೆಗಳ ಮಕ್ಕಳು ಉನ್ನತ ಶಿಕ್ಷಣದ ಪರಿಕಲ್ಪನೆಯ ಬೋಧನೆಯನ್ನು ಪಡೆಯುವಂತಾಗಿದೆ ಇನ್ನು ಚೌಳೂರು, ಕುರುಡಿಹಳ್ಳಿ, ಬಾಲೇನಹಳ್ಳಿ, ಹುಲಿಕುಂಟೆ, ಯಲಗಟ್ಟೆಗೊಲ್ಲರಟ್ಟಿ ಸೇರಿದಂತೆ ಹತ್ತು ಸರ್ಕಾರಿ ಶಾಲೆಗಳನ್ನು ನವಿಕೃತ ಮಾದರಿಯ ವಿಜಯನಗರ ಸಾಮ್ರಾಜ್ಯದ ಪರಿಕಲ್ಪನೆ, ಚಿತ್ರದುರ್ಗ ಕೋಟೆಯ ಪರಿಕಲ್ಪನೆ ಮತ್ತು ವಿಮಾನನಿಲ್ದಾಣ ಪರಿಕಲ್ಪನೆಯನ್ನು ಚಿತ್ರ ಬಿಡಿಸುವ ಮೂಲಕ ಶಾಲೆಗಳನ್ನು ನವೀಕೃತಗೊಳಿಸಲಾಗಿದೆ.
ಇದಲ್ಲದೆ ಮ್ಯಾಸಬ್ಯಾಡರ ಬುಡಕಟ್ಟು ಸಂಸ್ಕೃತಿಯ ಪ್ರತಿಕವಾದಂತ ನನ್ನಿವಾಳ, ಬಂಗಾರದೇವರೆಡ್ಡಿ, ಚನ್ನಮ್ಮನ ನಾಗತಿಹಳ್ಳಿ ಮುಂತಾದ ಆರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸ್ಮಾರ್ಟ್ಕ್ಲಾಸ್ ಒಳಗೊಂಡAತೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ.
ಬಾಕ್ಸ್ ಮಾಡಿ :
ತಾಲೂಕಿನಲ್ಲಿ ನಾಯಕನಹಟ್ಟಿ ಮತ್ತು ತಳಕು ಹೋಬಳಿಯ 11 ಗ್ರಾಮಗಳ ಶಾಲೆಗಳನ್ನು ದತ್ತು ತೆಗೆದುಕೊಂಡು ಕುವೈತ್ ಕನ್ನಡಿಗ ಪ್ರತಿಷ್ಠಾನದಿಂದ 11ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್, ಪೀಠೋಪಕರಣಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಒಳಗೊಂಡAತ ಪರಿಕಲ್ಪನೆಯ ಯೋಜನೆಯನ್ನು ರೂಪಿಸಿ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿ, ಹಿರೇಹಳ್ಳಿ ಗೌರಸಮುದ್ರ, ಮುಂತಾದ 11ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಇನ್ನೂ ಸಾರಿಗೆ ಸಚಿವ ಬಿ.ಶ್ರೀರಾಮುಲು ರವರ ಸಹಕಾರದಿಂದ ಈ ಕಾರ್ಯ ಮಾಡಿದೆ.— ಎನ್.ರಘುಮೂರ್ತಿ, ಈ ಹಿಂದೆ ಚಳ್ಳಕೆರೆ ತಾಲೂಕಿನ ತಹಶೀಲ್ದಾರ್.
ಬಾಕ್ಸ್ ಮಾಡಿ :
ಬಯಲು ಸೀಮೆಯಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ ಕುವೈತ್ ಕನ್ನಡಿಗ ಪ್ರತಿಷ್ಠಾನದಿಂದ ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್, ಪೀಠೋಪಕರಣಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಒಳಗೊಂಡAತ ಪ್ರಮುಖ ಸ್ಥಳಗಳ ಚಿತ್ರಗಳನ್ನು, ಮಹಾನೀಯ ಚಿತ್ರಗಳನ್ನು ಬಿಡಿಸಲಾಗಿದೆ ಇನ್ನೂ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಸಲುವಾಗಿ ದಾಣಿಗಳಿಂದ ಶಾಲೆಗಳನ್ನು ಹೆಚ್ಚಿನದಾಗಿ ಅಭಿವೃದ್ದಿ ಪಡಿಸಲಾಗಿದೆ.—ಕೆ.ಎಸ್.ಸುರೇಶ್,ಕ್ಷೇತ್ರಶಿಕ್ಷಣಾಧಿಕಾರಿಗಳು