ಚಳ್ಳಕೆರೆ : ಭಾರತೀಯ ಸಂಸ್ಕೃತಿಯಲ್ಲಿ ವಿಷ್ಠವಾದ ಭಾಷೆಹೊಂದಿದೆ, ಲಿಪಿ ಇಲ್ಲದೆ ಇರುವ ಭಾಷೆ ಬಂಜಾರ ಭಾಷೆಯಾಗಿದೆ. ಆದರೆ ಇವರ ವಿಶೇಷ ಉಡುಗೆ- ತೊಡುಗೆಯನ್ನು ಹೊಂದಿರುವ ಸಮುದಾಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಬಂಜಾರ ಸಮುದಾಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂತಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ಹಲವು ಸಂತರ ಸಾಲಿನಲ್ಲಿ ಬರುವ ಇವರು ಧಾರ್ಶನಿಕರ ಕಡಿಮೆ ಅವಧಿಯ ಜೀವಿತ ಅವಧಿಯಲ್ಲಿ ಎಲ್ಲಾ ಸಮುದಾಯಗಳಿಗೆ ನೀಡಿದ ಮಾರ್ಗದರ್ಶನ ಹಾಗೂ ಕೊಡೆಗೆಗಳು ಅಪಾರ ಇವರ ಸೇವೆ ಶಾಸ್ವತವಾಗಿ ಇರುವಂತ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ತಹಶೀಲ್ದಾರ್ ರೇಹಾನ್ ಪಾಷಾ ಮಾತನಾಡಿ ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ಕೊಡುವಂತ ಸುಸಂಸ್ಕೃತಿಯನ್ನು ವಚನಗಳ ಮೂಲಕ ಸಾಮಾಜಕ್ಕೆ ಕೊಡುಗೆ ನೀಡಿದ್ದಾರೆ ಇವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಹಾನಿಯರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಡಾ.ಚಂದ್ರನಾಯ್ಕ ಮಾತನಾಡಿ, ಎಲ್ಲಾ ಧರ್ಮಗಳಂತೆ ಬಂಜಾರ ಸಮುದಾಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಸಂತ ಸೇವಾಲಾಲ್ ಅವರ ಪರಿಶ್ರಮ ಅಪಾರವಾದದ್ದು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ನಾವು ನೀವುಗಳೆಲ್ಲ ಸಾಗುತ್ತಿದ್ದೆವೆ, ಅವರು ನೀಡಿದ ಸಂದೇಶಗಳು ಮತ್ತು ಹಿತವಾಣಿಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯಗಳು ಸದಾ ನಡೆಯಬೇಕು, ಬಂಜಾರ ಸಮುದಾಯದ ವೇಷ, ಭೂಷಣ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ಆದರೆ ಕೆಲವು ಕಡೆಗಳಲ್ಲಿ ಈ ಜನಾಂಗದ ವೇಷ, ಭೂಷಣ ಹಾಗೂ ಆಚರಣೆಗಳು ಕಡಿಮೆಯಾಗುತ್ತಿದ್ದು, ಇಂತಹ ವಿಶೇಷ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದರು.
ಸಮುದಾಯದ ಮಹಿಳಾ ಘಟಕದ ಪದಾಧಿಕಾರಿಗಳಾದ ಗೀತಾಬಾಯಿ ಮಾತನಾಡಿ, ಈಡೀ ಸಮುದಾಯವನ್ನು ಮುನ್ನೆಡೆಸಿಕೊಂಡು ಹೋಗುವ ಮೂಲಕ ಸೇವಾಲಾಲ್ ಅವರು ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಬಂಜಾರ ರೀತಿ ನೀತಿಗಳನ್ನು ಸಮಾಜದಲ್ಲಿ ಅಭಿವ್ಯಕ್ತ ಪಡಿಸುವ ಮೂಲಕ ಅವರ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ ಇತ್ತು ಎಂದರು.
ಸಮಾಜದ ಮುಖಂಡರಾದ ಡಾ.ಚಂದ್ರನಾಯ್ಕ, ಗೀತಾಬಾಯಿ, ಪುರುಶೋತ್ತಮನಾಯ್ಕ, ಕೆ.ಪಿ.ಭೂತಯ್ಯ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೀರಭದ್ರಪ್ಪ, ಶಶಿಧರ್, ಸದಸ್ಯರಾದ ರಮೇಶ್ ಗೌಡ, ಮಲ್ಲಿಕಾರ್ಜುನಾ, ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.