ಚಳ್ಳಕೆರೆ : ರಾಜ್ಯದಲ್ಲಿ ಮತದಾರರು ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಹೆಚ್ಚೆಚ್ಚು ಒಲವು ತೋರುತ್ತಿದ್ದು ನಮ್ಮ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಕನಸು ನನಸಾಗುವುದು, ಅದರಂತೆ ಚಳ್ಳಕೆರೆ ಕ್ಷೇತ್ರದಲ್ಲಿ ಜನರೂ ಈ ಬಾರಿ ಅಭೂತ ಪೂರ್ವವಾದ ಬೆಂಬಲ ತೋರಿಸುತ್ತಿದ್ದಾರೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ ರವೀಶ್ ಕುಮಾರ್ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
ಕ್ಷೇತ್ರದ ವಿವಿಧೆಡೆ ಸಂಚಾರಿಸಿ ಮಾತನಾಡಿದ ಅವರು, ಈಡೀ ಚಳ್ಳಕೆರೆ ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಜನರು ಒಲುವು ತೋರುತ್ತಿದ್ದಾರೆ. ಅದರಂತೆ ಮುಂಬರುವ 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರಂಟಿ, ಅದ್ದರಿಂದ ರಾಷ್ಟಿçÃಯ ಪಕ್ಷಗಳ ಪೊಳ್ಳು ಭರವಸೆಗಳನ್ನು ಮತದಾರರು ನಂಬದೆ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಈದೇ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಮುಖಂಡರಾದ ರಾಜಣ್ಣ, ಕೆ.ಗೋವಿಂದರಾಜು, ಟಿ.ಕೃಷ್ಣ, ರಾಜಣ್ಗಗೂಳ್ಯಾ, ಪಾಂಡುರAಗ, ಮೋಹನ, ಕುಮಾರ, ಚಂದ್ರು, ದಿನೇಶ, ಅರುಣ್‌ಕುಮಾರ, ಇತರರು ಪಾಲ್ಗೊಂಡಿದ್ದರು.