ಚಳ್ಳಕೆರೆ : ನಗರಸಭೆಯ ಅಧಿಕಾರಿಗಳು ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲು ಮುಂದಾಗಿದ್ದಾರೆ.
ಅದರAತೆ ಸಾರ್ವಜನಿಕರಿಗೆ ತ್ಯಾಜ್ಯ ಹಾಕಲು ಸೂಕ್ತವಾದ ಸ್ಥಳ ಹಾಗೂ ಆ ಸ್ಥಳದಲ್ಲಿ ಹಸಿಕಸ ಹಾಗೂ ಒಳ ಕಸ ಬೇರ್ಪಡಿಸುವ ಮೂಲಕ ಕಸ ಸಂಗ್ರಹದ ಸ್ಟೀಲ್ ಬಿನ್ ಗಳನ್ನು ಇಟ್ಟಿದ್ದಾರೆ.
ಹೌದು ನಗರದಲ್ಲಿ ದಿನ ನಿತ್ಯವೂ ತ್ಯಾಜ್ಯ ಸಂಗ್ರಹ ಹೆಚ್ಚಳದಿಂದ ನಗರದಲ್ಲಿ ರಸ್ತೆ, ಚರಂಡಿಗಳು ತ್ಯಾಜ್ಯದಿಂದ ತುಂಬಿರುತ್ತಾವೆ ಇದನ್ನು ಮನಗಂಡ ನಗರಸಭೆ ಅಧ್ಯಕ್ಷೆ ಸುಮಕ್ಕ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ನಿಗಧಿತ ಸ್ಥಳದಲ್ಲಿ ಡೆಸ್ಟ್ ಬಿನ್ ಗಳನ್ನು ಇಟ್ಟು ಕಸವನ್ನು ಸಂಗ್ರಹ ಮಾಡುವ ಮೂಲಕ ಸ್ವಚ್ಚ ನಗರಕ್ಕೆ ಪಣ ತೊಟ್ಟಿದ್ದಾರೆ.

ಅದರಂತೆ ನಗರದಲ್ಲಿ ನಗರಸಭೆಯ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಚಳ್ಳಕೆರೆಯ ಜನಸಂದಣಿ ಇರುವ ಪ್ರದೇಶಗಳಲ್ಲಿ ಬಂದು ಹೋಗುವ ಜನರಿಗೆ ಅನುಕೂಲವಾಗಲು ಸು.65 ಸಂಖ್ಯೆಯ 2 ವಿಭಾಗವಿರುವ ಬುಟ್ಟಿಯ ಸ್ಟೀಲ್ ಬಿನ್ ಗಳನ್ನು ಅಳವಡಿಸಲಾಗಿದೆ.

ಇನ್ನೂ ನಗರದಲ್ಲಿ ಸಾರ್ವಜನಿಕರಿಗೆ ತ್ಯಾಜ್ಯ ಮುಕ್ತ ನಗರಕ್ಕೆ ಅರಿವು ಮೂಡಿಸುವ ಜೊತೆಗೆ ರಸ್ತೆ ಪಕ್ಕದಲ್ಲಿ ಡೆಸ್ಟ್ ಬಿನ್ ಅಳವಡಿಸಿದ್ದಾರೆ.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಆಂಜನೇಯ, ಉಪಾಧ್ಯಕ್ಷೆ ಮಂಜುಳ ಆರ್ ಪ್ರಸನ್ನಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಪೌರಾಯುಕ್ತರಾದ ಸಿ.ಚಂದ್ರಪ್ಪ ಹಾಜರಿದ್ದರು.

ಬಾಕ್ಸ್ ಮಾಡಿ :
ನಗರದ ಪ್ರಮುಕ ರಸ್ತೆಗಳಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿಯೇ ಹಾಕದೇ ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಹಾಕುವ ಮೂಲಕ ನಗರದ ಸ್ವಚ್ಚತೆಗೆ ಪ್ರತಿಯೊಬ್ಬರು ಕಂಕಣ ಬದ್ದರಾಗಬೇಕು– ಎಂ.ಜೆ.ರಾಘವೇAದ್ರ,
ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ

Namma Challakere Local News

You missed

error: Content is protected !!