ತಹಶೀಲ್ದಾರ್ ಎನ್.ರಘುಮೂರ್ತಿಗೆ ಕಂದಾಯ ಇಲಾಖೆಯಿಂದ ಆತ್ಮೀಯವಾಗಿ ಬಿಳ್ಕೊಡುಗೆ

ಚಳ್ಳಕೆರೆ : ತಾಲೂಕಿನ ಜನತೆ ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಹಕಾರದಿಂದ ಕಳೆದ ಎರಡು ವರ್ಷಗಳಿಂದ ತಾಲೂಕಿಗೆ ಸಲ್ಲಿಸಿರುವಂತಹ ಸೇವೆ ನನ್ನ ಸೇವಾ ಅವಧಿಯಲ್ಲಿ ಅತ್ಯಂತ ತೃಪ್ತಿ ತಂದAತ ಕಾರ್ಯವಾಗಿದೆ ಎಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಅವರು ತಾಲೂಕ ಕಚೇರಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ಏರ್ಪ ಪಡಿಸಿದಂತಹ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಚಿತ್ರದುರ್ಗದ ಹಿಂದಿನ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಾರಿಗೆ ಮಂತ್ರಿಗಳಾದ ಬಿ.ಶ್ರೀರಾಮುಲು, ಕೇಂದ್ರ ಮಂತ್ರಿಗಳಾದ ನಾರಾಯಣಸ್ವಾಮಿ ಅವರು ಮತ್ತು ಕ್ಷೇತ್ರದ ಶಾಸಕ ಟಿ.ಮೂರ್ತಿ ತಾಲೂಕಿನಲ್ಲಿರುವಂತಹ ಶೋಷಿತರ ಹಿಂದುಳಿದವರ ಮತ್ತು ಅಸಹಾಯಕರ ಕೆಲಸ ಮಾಡಲು ಮತ್ತು ಸರ್ಕಾರಿ ಸೌಲತ್ತುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲು ಸಹಕಾರ ನೀಡಿದ್ದಾರೆ.
ತಾಲೂಕಿನ ಕಂದಾಯ ಇಲಾಖೆ ಸಿಬ್ಬಂದಿಗಳು ಕಂದಾಯ ಇಲಾಖೆಯ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಸಹಕಾರ ನೀಡಿ ನನ್ನ ಜೊತೆ ಕೆಲಸ ಮಾಡಿದ್ದಾರೆ.
ಪ್ರತಿಯೊಬ್ಬ ಅಧಿಕಾರಿ ನೌಕರಿಗಳಿಗೂ ಇಂತಹ ತಾಲೂಕುಗಳಲ್ಲಿ ಕೆಲಸ ಮಾಡುವ ಯೋಗ ಅವರ ಸೇವಾಧಿಯಲ್ಲಿ ಒಂದು ಬಾರಿ ಬರುತ್ತದೆ ಇಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಕ್ರಾಂತಿಯೋಗಿ ಬಸವಣ್ಣನವರ ಆದರ್ಶಗಳು ಮತ್ತು ಆಶಯದಂತೆ ಇಂತಹ ವರ್ಗದವರ ಪೂರ್ಣ ಪ್ರಮಾಣದ ಕೆಲಸಗಳನ್ನು ಮಾಡಿದಾಗ ಮಾತ್ರ ಜನರ ಮನಸ್ಸಿನಲ್ಲಿ ಅಧಿಕಾರಿ ನೌಕರರು ಉಳಿಯಲು ಸಾಧ್ಯ.
ತಾಲೂಕಿನಲ್ಲಿ ಈಗಾಗಲೇ ಉಳಿದಿರುವಂತಹ ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನು ಅಂದರೆ ಎಲ್ಲಾ ಬಗೆಯ ಸರ್ಕಾರಿ ಸೌಲತ್ತುಗಳನ್ನು ಎಲ್ಲ ಗ್ರಾಮಗಳಿಗೂ ತಲುಪಿಸುವ ಕುರಿತಾದಂತಹ ಕಾರ್ಯ ಸೂಚಿಯನ್ನು ಮುಂದುವರಿಸುವAತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿ ನೌಕರರಿಗೆ ಮನವಿ ಮಾಡಿದರು.
ತಾಲೂಕ ಕಚೇರಿಯ ಗ್ರೇಟ್ 2 ತಹಶೀಲ್ದಾರ್ ಸಂಧ್ಯಾ, ದಲಿತ ಮುಖಂಡರಾದAತ ಮೈತ್ರಿ ದ್ಯಾಮಣ್ಣ, ಸರಕಾರಿ ನೌಕರ ಸಂಘದ ಅಧ್ಯಕ್ಷ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ನೌಕರರ ಸಂಘದ ಅಧ್ಯಕ್ಷ ರಂಗನಾಥ್, ದಲಿತ ಮುಖಂಡರಾದ ಶಿವಮೂರ್ತಿ ಮುಂತಾದವರು ಮಾತನಾಡಿದರು
ತಾಲೂಕಿನ ಕಂದಾಯ ಇಲಾಖೆ ಎಲ್ಲಾ ಅಧಿಕಾರಿ ಸಿಬ್ಬಂದಿ ಭಾಂಧವರು ಉಪಸ್ಥಿತರಿದ್ದರು

Namma Challakere Local News
error: Content is protected !!