ಚಳ್ಳಕೆರೆ : ಈಡೀ ರಾಜ್ಯದಲ್ಲಿ ಮಾದಿಗರು ಒಗ್ಗೂಡಬೇಕು, 2023ರ ವರ್ಷ ಮಾದಿಗರ ವರ್ಷವಾಗಬೇಕು, ಅನೇಕ ವರ್ಷಗಳಿಂದ ಅನ್ಯರ ಕೈಹಾಳುಗಳಂತೆ ಇರುವ ಮಾದಿಗರು ಒಗ್ಗೂಡಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.


ಅವರು ನಗರದ ಹೊರವಲಯದ ಅಕ್ಷಯ ಉದ್ಯಾಯನವನದಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಮಾದಿಗ ಮಹಾಸಭಾ ಸಂಘದ ಸದಸ್ಯತ್ವ ನೊಂದಣಿಗೆ ಚಾಲನೆ ನೀಡಿ ಮಾತನಾಡಿದರು, ನಾನು ನಿಮ್ಮ ಮುಂದೆ ನಿಂತಿರುವುದು ಕೇಂದ್ರ ಮಂತ್ರಿಯಾಗಿ ಅಲ್ಲ, ನಿಮ್ಮ ಮಾದಿಗರ ಮಗನಾಗಿ ಈಡೀ ರಾಜ್ಯದಲ್ಲಿ ಮಾದಿಗರ ಕಷ್ಟಗಳನ್ನು ಕಣ್ಣಾರೆ ಕಂಡು, ಅವರ ನೋವುಗಳನ್ನು ಉಂಡು ಈಡೀ ದೇಶದಲ್ಲಿ ಹಲವು ರಾಜ್ಯಗಳಲ್ಲಿ ನಮ್ಮವರ ಸ್ಥಿತಿಯನ್ನು ಹರಿತಿರಿವೆನು, ಮಾದಿಗ ಸಮಾಜವು ಶರಣರ ರೀತಿಯಲ್ಲಿ ಶಿಕ್ಷಣ ನೀಡುವ ಮಹತ್ವದ ಹೆಜ್ಜೆ ಇಡಬೇಕು, ಸಮಾಜದಲ್ಲಿ ಆರ್ಥಿಕವಾಗಿ ಸಬಲರಾದರೆ ತಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರುತ್ತಾರೆ, ಬೀದಿ ಬೀದಿಯಲ್ಲಿ ಅಂಬೇಡ್ಕರ್ ಪ್ರತಿಮೆ, ಅಂಬೇಡ್ಕರ್ ಕ್ರಾಂತಿ ಗೀತೆಗಳನ್ನು ಹಾಡಿದರೆ ಸಮುದಾಯ ಬದಲಾಗುವುದಿಲ್ಲ ಅದನ್ನು ಅನುಸರಿಸಬೇಕು, ಬಸವಣ್ಣನವರ ಕ್ರಾಂತಿ ಗೀತೆಗಳು ಈಡೀ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಿದೆ, ಆದ್ದರಿಂದ ಮಾದಿಗರ ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕು, ಈಗಾಗಲೇ 14 ಜಿಲ್ಲೆಯಲ್ಲಿ ನಾನು ಬೇಟಿ ನೀಡಿದ್ದೆನೆ,
ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳ ಉನ್ನತ ವ್ಯಾಸಂಗ, ಆರ್ಥಿಕ, ಸಬಲತೆಗೆ, ಸಮಾಜದ ಅಭಿವೃದ್ದಿಗೆ ನೀವು ಒಂದಾಗಲೇಬೇಕು, ಆದ್ದರಿಂದ ನಿಮ್ಮ ಮಕ್ಕಳ ಭವಿಷ್ಯ ಕಾಣಲು ಈ ಸಂಘಕ್ಕೆ ಸದಸ್ಯರಾಗಿ ನಿಮ್ಮ ಸಂಘದಲ್ಲಿ ನಿವೇ ಸದಸ್ಯರಾಗಿ ಚುನಾವಣೆ ಮಾಡಿಕೊಳ್ಳಿ, ನಮ್ಮ ಸಮಾಜಕ್ಕೆ ಯಾರು ಕಾಳಜಿ ತೋರುತ್ತಾರೋ ಅವರು ನಮ್ಮ ಸಮಾಜದಲ್ಲಿ ಮೊದಲ ಪಂಕ್ತಿಯಲ್ಲಿ ಇರುತ್ತಾರೆ ಎಂದರು.


ಈಡೀ ರಾಜ್ಯದಲ್ಲಿ ಎಲ್ಲಾ ಪಕ್ಷಗಳಲ್ಲಿ ಮಾದಿಗರ ಬಗ್ಗೆ ಮಾತನಾಡುವಂತಾಗಬೇಕು ಟಿಕೆಟ್ ನೀಡಲು ಮುಂದೆ ಬರಬೇಕು, ಅಂತಹ ಕಾರ್ಯ ನೀವು ಮಾಡಬೇಕು ಸಂಘ ಕಟ್ಟಿ ಭವಿಷ್ಯದ ದಿನಗಳಲ್ಲಿ ನಿಮ್ಮ ಮಕ್ಕಳಿಗೆ ನೆರವಾಗಬೇಕು, ಜಿಲ್ಲೆಯಲ್ಲಿ ಹಕ್ಕು ಪತ್ರ ಇದ್ದರು ಮನೆ ಕಟ್ಟಿಕೊಳ್ಳಲು ಹಾಗುತ್ತಿಲ್ಲ, ಹಕ್ಕು ಪತ್ರ ಇದ್ದರು ಭೂಮಿ ಸಿಗುತ್ತಿಲ್ಲ ಈಗೇ ಮಾದಿಗ ಸಮುದಾಯದ ಸ್ಥೀತಿ ಶೋಚನೀಯ ಎಂದರು.


ಮಾಜಿ ನಗರಸಭಾ ಸದಸ್ಯ ಎಂ.ಶಿವಮೂರ್ತಿ ಮಾತನಾಡಿ, ಚಳ್ಳಕೆರೆಯಲ್ಲಿ ಕೊಲುಮೆ ರಸ್ತೆಯಲ್ಲಿ ಇರುವ ಭೂಮಿಯನ್ನು ಹಾಗೂ ಚರ್ಮದಮಂಡಿ ಜಾಗವನ್ನು, ಇಂದು ಮಾದಿಗ ಸಮುದಾಯಕ್ಕೆ ಸೇರಲು ಸಚಿವ ನಾರಾಯಣಸ್ವಾಮಿ ಕಾರಣ ಆದ್ದರಿಂದ ಮುಂದಿನ ದಿನಗಳಲ್ಲಿ ಮಾದಿಗರ ಶೈಕ್ಷಣಿಕ ವಿದ್ಯಾಕೇಂದ್ರಗಳಾಗಬೇಕು, ಬೃಹತ್ ಕಟ್ಟಡÀಗಳಿಂದ ಆದಾಯ ಬರುವ ಮೂಲಗಳು ನಗರದಲ್ಲಿ ಸೃಷ್ಠಿಯಾಗಬೇಕು ಅನ್ಯರ ಬಳಿ ಕೈ ಚಾಚದೆ ನಮ್ಮ ಮಕ್ಕಳ ವ್ಯಾಸಂಗಕ್ಕೆ ಸಂಘದಿAದ ಆರ್ಥಿಕ ನೆರವು ನೀಡುವ ಶಕ್ತಿ ನಾವೇ ಮಾಡಿಕೊಳ್ಳೋಣ ಎಂದರು
ಸಭೆಯಲ್ಲಿ ಎಂ.ಶಿವಮೂರ್ತಿ, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ್, ತಾಪಂ.ಮಾಜಿ ಸದಸ್ಯ ಹೆಚ್.ಸಮರ್ಥರಾಯ್ ಮಾತನಾಡಿದರು,

ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮೋಹನ್, ಮಾಜಿ ನಗರಸಭೆ ಸದಸ್ಯ ಎಂ.ಶಿವಮೂರ್ತಿ, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ಟಿ.ವಿಜಯ್‌ಕುಮಾರ್, ಕರಿಕೆರೆ ತಿಪ್ಪೆಸ್ವಾಮಿ, ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್, ಪತ್ರಕರ್ತ ರಾಮುದೊಡ್ಮನೆ, ಆನಂದ್, ನನ್ನಿವಾಳ ಬಸವರಾಜ್, ದಯಾನಂದ್, ಶ್ರೀನಿವಾಸ್, ದ್ಯಾವರನಹಳ್ಳಿ ಸುರೇಶ್, ಚನ್ನಗಾನಹಳ್ಳಿ ತಿಪ್ಪೆಸ್ವಾಮಿ, ತಾರಕೇಶ್, ಕೃಷ್ಣಮೂರ್ತಿ, ಬಂಗ್ಲೆಶ್ರೀನಿವಾಸ್, ರಮೇಶ್, ಇತರರು ಮಾದಿಗ ಮುಖಂಡರು ಇದ್ದರು.

Namma Challakere Local News
error: Content is protected !!