ಬುಕ್ಕಾಂಬೂದಿ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನಾ ಸ್ಪರ್ಧೆ

ಚಳ್ಳಕೆರೆ : ಜಾಗತೀಕ ಮಟ್ಟದಲ್ಲಿ ಗಣಿತ ಕ್ಷೇತ್ರಕ್ಕೆ ಅಗ್ರಮಾನ್ಯ ಸ್ಥಾನವಿದ್ದು ಈ ಕ್ಷೇತ್ರಕ್ಕೆ ಭಾರತೀಯ ಗಣಿತಜ್ಞರಾದ ಆರ್ಯಭಟ ಪೈಥಾಗೋರಾಸ್ ಮತ್ತಿತರು ಮಹಾನ್ ತಜ್ಞರು ಗಣಿತಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸಿಆರ್‌ಪಿ ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿರು.
ಅವರು ತಾಲೂಕಿನ ಬುಕ್ಕಾಂಬೂದಿ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಕಲಿಕಾ ಆಂದೋಲನಾ ಸ್ಪರ್ಧಾ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳು ಬುನಾದಿ ಹಂತದಿAದ ಕರಾರು ವಕ್ಕಾದ ಗಣಿತ ಪಕ್ರಿಯೆಗಳನ್ನು ಕಲಿಯಬೇಕು ಅವುಗಳನ್ನು ದಿನ ನಿತ್ಯದ ಜೀವನದಲ್ಲಿ ಅನ್ವಯ ಮಾಡಿಕೊಳ್ಳಬೇಕು ಜೀವನದಲ್ಲಿ ಗಣಿತವನ್ನು ಸರಿಯಾದ ಕ್ರಮದಲ್ಲಿ ಕಲಿತರೆ ಮಾತ್ರ ಜೀವನ ನಿರ್ವಹಣೆ ಉತ್ತಮವಾಗಿರುತ್ತದೆ ಎಂದರು.
ಈದೇ ಸಂಧರ್ಭದಲ್ಲಿ ಗ್ರಾಪಂ.ಸದಸ್ಯರಾದ ಮಹಾಲಕ್ಷಿö್ಮÃವೆಂಕಟೇಶ್, ಪರುಶುರಾಮ್ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಾ, ಮಾರಯ್ಯ, ಬಡ್ತಿಮುಖ್ಯ ಶಿಕ್ಷಕ ನಾಗರಾಜ್, ನೋಡೆಲ್ ಅಧಿಕಾರಿ ರಾಜಣ್ಣ, ಮಾರುತಿ, ಮಂಜುನಾಥ್, ತಿಪ್ಪೆರುದ್ರಪ್ಪ, ಉಮೇಶ್, ಹಾಗೂ ದೇವರೆಡ್ಡಿಹಳ್ಳಿ ಕ್ಲಸ್ಟರ್‌ನ ಎಲ್ಲಾ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

Namma Challakere Local News
error: Content is protected !!