ಚಳ್ಳಕೆರೆ : ಬಯಲು ಸೀಮೆಯಲ್ಲಿ ಶಿಕ್ಷಣ ಎಂಬುದು ಮರೀಚೀಕೆಯಾಗಿತ್ತು ಆದರೆ ಕಳೆದ ಹತ್ತು ವರ್ಷಗಳಲ್ಲಿ ನನ್ನ ಶಾಸಕ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಉತ್ತಮವಾದ ಶಿಕ್ಷಣ ನೀಡಲು ಪ್ರೋತ್ಸಾಹಿಸಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಸಾಂಸ್ಕೃತಿಕ, ಎನ್ ಎಸ್ ಎಸ್ ಮತ್ತು ರೋವರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ತೇಜಸ್ ಇಂಡಿಯಾ ಬೆಂಗಳೂರು ಬಯಲು ಸೀಮೆ ಕಲಾ ಬಳಗ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಎಂ.ರವೀಶ್ ಹುಲಿಕುಂಟೆ ಇವರ ನೀಲಿ ನಕ್ಷತ್ರ ನಾಗರಾಜ್ ಬೆಳಗಟ್ಟ ಇವರ ಮುಗಿಲಿಗೆ ಮನಸ್ಸು ಹಾರಲು ಬಿಟ್ಟು ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸುಮಾರು 118ವರ್ಷಗಳ ಇತಿಹಾಸದಲ್ಲಿ ನಮ್ಮ ಬಯಲು ಸೀಮೆಗೆ ವಾಣಿವಿಲಾಸ ಸಾಗರದಿಂದ ನೀರು ಕಾಣದಾಗಿತ್ತು ಆದರೆ ಕಾಂಗ್ರೇಸ್ ಅವಧಿಯಲ್ಲಿ ಚಳ್ಳಕೆರೆ ಕ್ಷೇತ್ರಕ್ಕೆ ವೇದಾವತಿ ನದಿ ಮೂಲಕ ನೀರು ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಚಂದ್ರಶೇಖರ್ ತಾಳ್ಯ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಪ್ರಾಚಾರ್ಯರಾದ ಎಂ.ರವೀಶ್, ಪುಸ್ತಕ ಪ್ರಕಾಶಕರಾದ ಡಾಕ್ಟರ್ ಸಿವಿಜಿ ಚಂದ್ರು, ಸಾಹಿತಿಗಳಾದ ತಿಪ್ಪಣ್ಣ ಮರಿಕುಂಟೆ, ನೌಕರರ ಸಂಘದ ಉಪಾಧ್ಯಕ್ಷರಾದ ಕೆವಿ ಚಂದ್ರಶೇಖರ್, ಹಿರಿಯೂರು ಲೇಖಕರಾದ ಪ್ರೊಫೆಸರ್ ಎಂಜಿ.ರAಗಸ್ವಾಮಿ, ಹಾಗೂ ಮುಖಂಡರು, ಕಾರ್ಯಕರ್ತರು ಮತ್ತು ಉಪನ್ಯಾಸಕ ವರ್ಗ ಜಬೀವುಲ್ಗಾ, ನಾಗರಾಜ್ ಬೆಳಗಟ್ಟ, ವಸಂತಕುಮಾರ್, ಹಬೀಬ್, ಚಂದ್ರಶೇಖರ್, ನಾಗಭೂಷಣ ಸ್ವಾಮಿ, ಶಿವಪ್ಪ, ಜಗದೀಶ್, ಪುಟ್ಟರಂಗಪ್ಪ, ರವಿಕುಮಾರ್, ಪುಷ್ಪಲತ ಜಿಟಿ, ಶಾಂತಕುಮಾರಿ ಬಿ, ಮಹಂತೇಶ್, ಡಿಕೆ.ಚಂದ್ರಶೇಖರ್, ಈರಣ್ಣ, ಲಲಿತಮ್ಮ , ಜಾನಕಮ್ಮ , ಹೀನ ಕೌಸರ್, ರೇಖ, ಹಾಗೂ ಅಥಿತಿ ಉಪನ್ಯಾಸಕರು ಇತರರು ಇದ್ದರು.

Namma Challakere Local News
error: Content is protected !!