ಚಳ್ಳಕೆರೆ : ಸಾಹಿತಿಗಳು ಹುಟ್ಟಿ ಬೆಳೆದ ನಮ್ಮ ಕ್ಷೇತ್ರದಲ್ಲಿ ಸಾಹಿತ್ಯಕ್ಕೆ ಎಂದು ಬರವಿಲ್ಲ, ಆದರಂತೆ ಇಂದು ಯುವ ಕವಿಗಳು , ಸಾಹಿತಿಗಳು ನಮ್ಮ ನೆಲದಲ್ಲಿ ಪ್ರತಿಬಿಂಬಿಸುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದ ನಾಟಕ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂತಹ ಬಯಲು ಸೀಮೆಯಲ್ಲಿ ಜೀವನದ ಹಾಸುಹೊಕ್ಕಾಗಿರುವ ಸಾಹಿತಿಕ ಬದುಕಿನಲ್ಲಿ ಸಾಮಾಜಿಕ ನಾಟಕ ಕೃತಿ ಬಿಡುಗಡೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಎಸ್‌ಬಿ.ನರಸಿಂಹಮೂರ್ತಿ, ಮುಖಂಡರುಗಳಾದ ಕೇಶವಣ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗರಾಜ್ ಗ್ರಾಮ ಪಂಚಾಯತ್ ಸದಸ್ಯರಾದ ನರಸಿಂಹಮೂರ್ತಿ ಎಚ್‌ಎಸ್ ಸೈಯದ್, ದೊಡ್ಡರಂಗಪ್ಪ , ಶಿವಕುಮಾರ್‌ಸ್ವಾಮಿ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.