ಚಳ್ಳಕೆರೆ : ತಾಲೂಕಿನ ಕಾಪರಹಳ್ಳಿ ಗ್ರಾಮದಲ್ಲಿ ನಡೆದ ಮುಖಂಡರುಗಳ ಸಭೆ ಮತ್ತು ವಿವಿಧ ಪಕ್ಷಗಳ ಮುಖಂಡರುಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಆಡಳಿತ ರೂಢ ಬಿಜೆಪಿ ಸರಕಾರದಿಂದ ರಾಜ್ಯದ ಜನರು ಬೇಸತ್ತಿದ್ದಾರೆ, ಕೇವಲ ಕಮಿಷನ್ ಪಡೆಯುವ ಸಲುವಾಗಿ ಯೋಜನೆಗಳನ್ನು ರೂಪಿಸಿ ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಕಾರ್ಯಕರ್ತರ ಸಭೆ ಮತ್ತು ಜೆ.ಡಿ.ಎಸ್ ಪಕ್ಷದ ಮುಖಂಡರುಗಳಾದ ರಮೇಶ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಕುಮಾರ್, ವಸಂತಕುಮಾರ್, ತಿಪ್ಪೇಸ್ವಾಮಿ ರೈತ ಸಂಘದ ಹಂಪಣ್ಣ, ಗುರುಮೂರ್ತಿರವರು ಶಾಸಕರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾAತ್, ಗ್ರಾಮ ಪಂಚಾಯತ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡರುಗಳಾದ ಅಂಜಿನ ಮೂರ್ತಿ, ಮಹಾಲಿಂಗಪ್ಪ, ಲಿಂಗರಾಜ್, ದುರ್ಗೇಶ್ ,ಗುರುಮೂರ್ತಿ, ಮಚ್ಚೇಂದ್ರಪ್ಪ, ಮಹಾಲಿಂಗಪ್ಪ, ಗುರುಮೂರ್ತಿ, ಪ್ರಭುದೇವ್, ಸಿದ್ದೇಶ್, ಗೋಪಿನಾಥ್, ಅಶೋಕ್, ಮಂಜುನಾಥ್, ರವಿಕುಮಾರ್, ಬಸವರಾಜ್, ಬಾಣಪ್ಪ, ರಂಗನಾಥ್, ತಿಪ್ಪೇಸ್ವಾಮಿ, ನಾಗರಾಜ್, ಮುಂತಾದವರು ಹಾಜರಿದ್ದರು.