ಚಿತ್ರದುರ್ಗ: ಶಾಲೆಗಳಲ್ಲಿಂದು ಶಿಕ್ಷಣವು ವ್ಯಾಪಾರೋದ್ಯಮವಾಗಿದೆ ಎಂದು ಪತ್ರಕರ್ತ ಹಾಗು ಯುವಜನ ಸೇವಾ ಕ್ರೀಡಾ ಇಲಾಖೆಯ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕ್ರತ ಎಸ್.ಸಿದ್ದರಾಜು ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದ ನೂತನ್ ಗ್ರಾಮೀಣ ಹಾಗು ಶಿಕ್ಷಣಾಭಿವೃದ್ಧಿ ಸಂಸ್ಥೆಯಯಲ್ಲಿ ನಡೆದ ಇನ್ನೋವೇಷನ್ ಫೆಸ್ಟ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಿಸಬೇಕಾದ ಶಿಕ್ಷಣ ಸಂಸ್ಥೆಗಳು ಇಂದು ಪೋಷಕರ ಪಾಲಿಗೆ ಮಾರಕವಾಗಿವೆ.
ಡೊನೇಷನ್ ಹೆಸರಲ್ಲಿ ಪೋಷಕರ ರಕ್ತ ಬಸಿಯುತ್ತಿವೆ.ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣಕ್ಕಿಂತ ಮುಖ್ಯವಾಗಿ ಹಣಕ್ಕೆ ಆದ್ಯತೆ ನೀಡ್ತಿವೆ.ಪರಿಣಿತ ಶಿಕ್ಷಕರ ಬದಲಾಗಿ ಕಡಿಮೆ ಸಂಬಳಕ್ಕೆ ಬರುವ ನಿರುದ್ಯೋಗಿಗಳಿಗೆ ಮಣೆ ಹಾಕಿ ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಮೊಟಕುಗೊಳಿಸ್ತಿವೆ.ಇದರಿಂದಾಗಿ ಕಷ್ಟಪಟ್ಟು ಬಿಇಡಿ,ಎಂಎ ಪದವಿಧರ ಪರಿಣೀತ ಶಿಕ್ಷಕರಿಗೆ ಅನ್ಯಾಯವಾಗ್ತಿದೆ.ಸರ್ಕಾರ ಸಹ ಅಗತ್ಯವಿರುವಷ್ಟು ಶಿಕ್ಷಕರಿಗೆ ಸರ್ಕಾರಿ ಕೆಲಸ ನೀಡ್ತಿಲ್ಲ.ಹೀಗಾಗಿ ಇದು ಶಿಕ್ಷಣದ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದೆ.
ಇನ್ನು ವಿಶ್ವಕ್ಕೆ ಮಾರಕ ಎನಿಸಿದ್ದ ಕೊರೋನ ಸಂಧರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಾಕಷ್ಟು ಜನ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಡೊನೇಷನ್ ಕಟ್ಟಲಾಗದೇ ಶಿಕ್ಷಣದಿಂದ ವಂಚಿತರಾದರು.
ಇAತಹ ಸಂಧರ್ಭದಲ್ಲಿ ಹಣವೊಂದೇ ಮಾನದಂಡ ಎಂದು ಪರಿಗಣಿಸದೇ, ಶಿಕ್ಷಣದಿಂದ ವಂಚಿತರಾಗುವ ಆತಂಕದಿAದ ಕಂಗಾಲಾಗಿದ್ದ ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಿದ ನೂತನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ರಾಘವೇಂದ್ರ 20 ಅಧಿಕ ಪಿಯುಸಿ ವಿದ್ಯಾರ್ಥಿನಿಯರಿಗೆ ನಿಸ್ವಾರ್ಥದಿಂದ ಉಚಿತ ಶಿಕ್ಷಣ ನೀಡ್ತಿದ್ದಾರೆ.ಅಲ್ಲದೇ 90 ಕ್ಕೂ ಅಧಿಕ ಪ್ರಾಥಾಮಿಕ ಹಾಗು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡ್ತಿರುವ ಈ ಸಂಸ್ಥೆಯ ಕಾರ್ಯ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿಎನಿಸಿದೆ
ಈ ಅವಕಾಶವನ್ನು ಬಳಸಿಕೊಂಡು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅವರ ಪ್ರತಿಭಾವಂತಿಕೆ ಹೊರಹೊಮ್ಮಿಸಲು ಇದೊಂದು ಸದಾವಕಾಶ ಎನಿಸಿದೆ.ಆದ್ದರಿಂದ ವಿದ್ಯಾರ್ಥಿಗಳು ಗುರಿ ಹಾಗೂ ಗುರುವನ್ನು ಮರೆಯದೇ ತಮ್ಮಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು.ತಮ್ಮ ಶಿಕ್ಷಣಕ್ಕೆ ನೆರವಾದ ಶಿಕ್ಷಣ ಸಂಸ್ಥೆ ಹಾಗೂ ಪೋಷಕರಿಗೆ ಒಳ್ಳೆಯ ಹೆಸರನ್ನು ತರುವನಿಟ್ಟಿನಲ್ಲಿ ಶ್ರದ್ಧಭಕ್ತಿಯಿಂದ ಅಧ್ಯಯನ ನಡೆಸಿ ಉನ್ನತ ಸ್ಥಾನಕ್ಕೇರಬೇಕು ಎಂದು ಆಶಿಸಿದರು
ಕಾರ್ಯಕ್ರಮದಲ್ಲಿ ನಿವೃತ್ತ ವಿಜ್ಞಾನಿಗಳಾದ ಎಂಎನ್ ನಾಗರಾಜ್ ಅವರು ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗಬೇಕಾದ ಪೂರ್ವ ಸಿದ್ಧತೆ ಕುರಿತು ಉಪನ್ಯಾಸ ನೀಡಿದರು.ಶಿಕ್ಷಣನಿಂತ ನೀರಾಗಬಾರದು.ಒಬ್ಬರಿಂದ ಒಬ್ಬರಿಗೆ ಹರಡುವ ವಿಚಾರವಾಗಬೇಕು ಎಂದರು. ಶಿಕ್ಷಕರಾದ ದಾಸೇಗೌಡ ವಿದ್ಯಾರ್ಥಿಗಳಿಗೆ ಬಾಲ ವಿಜ್ಞಾನದ ಮಹತ್ವ ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ,ವಕೀಲ ಸುದರ್ಶನ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜಸೇವಕರು ಹಾಗು ಹೋರಾಟಗಾರರಾದ ದಾದಾಪೀರ್,ಶಿಕ್ಷಕ ಕಲಂದರ್ ಉಪಸ್ಥಿತರಿದ್ದರು.ಈ ವೇಳೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಕಿಸವಿತ ಬಾಲರಾಜ್ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರರಾದ ನಾಗರಾಜ್ ಸ್ವಾಗತಿಸಿದರು.ವಿದ್ಯಾರ್ಥಿಗಳಾದ ಕುಸುಮ,ಪೂರ್ವಿಕ ಕಾರ್ಯಕ್ರಮದಲ್ಲಿ ಹಾಜರಿದ್ದ ಅತಿಥಿಗಳನ್ನು ಪರಿಚಯಿಸಿದರು.ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಜ್ಞಾನಾರ್ಜನಾ ಪರೀಕ್ಷೆಯನ್ನು ವಿಜ್ಞಾನಿ ನಾಗರಾಜ್ ನೇತೃತ್ವದಲ್ಲಿ ನಡೆಸಲಾಯಿತು.ಈ ವಿಶೇಷ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳು ಪುಳಕಿತರಾದರು..