ಚಳ್ಳಕೆರೆ : ಬುಡಕಟ್ಟುಗಳ ತವರೂರು ಆದ ಮೊಳಕಾಲ್ಮೂರು ತಾಲೂಕಿನ ಕಂಪಳ ದೇವರ ಹಟ್ಟಿಯಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಕಂಪಳ ದೇವರ ಜಾತ್ರೆ ತೆರೆಕಂಡಿದೆ.
ಪ್ರತಿ ವರ್ಷ ಆಚರಿಸುವ ಈ ಜಾತ್ರೆಯನ್ನು ತುಂಬಾ ಅದ್ಧೂರಿಯಾಗಿ ಎರಡು ರಾಜ್ಯದ ಆಂದ್ರ ಮತ್ತು ಕರ್ನಾಟಕ ರಾಜ್ಯದ ಸಾವಿರಾರು ಭಕ್ತಾದಿಗಳು ಸೇರಿ ಆಚರಿಸುತ್ತಾರೆ, ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಸುತ್ತಲಿನ ಹಲವು ಗ್ರಾಮಗಳು ಸಾಕ್ಷಿಕರಿಸುತ್ತಾವೆ.
ಕಾಸು ಮೀಸಲಿಡುವ ಭಕ್ತರ ನಂಬಿಕೆಯAತೆ ಇಡೀ ರಾತ್ರಿ ಪಂಜು ಕುಣಿತದ ಜೊತೆಗೆ ಪಂಜು ನುಂಗುವ ಪವಾಡ ಕೂಡ ನಡೆಯುತ್ತದೆ,
ಕಂಪಾಳ ದೇವರಿಗೆ ಬಾಳೆಹಣ್ಣು ಮತ್ತು ಬೆಲ್ಲ ಹಾಗೂ ಹೂವಿನಿಂದ ವಿಶೇಷ ಪೂಜೆ ಸಲ್ಲಿಸುತ್ತಾರೆ, ನಂತರ ಪುಟ್ಟಿಯಲ್ಲಿ ದೇವರ ವಿಗ್ರಹವನ್ನಿಟ್ಟು ಹೆಣ್ಣು ಮಕ್ಕಳು ಮತ್ತು ಪುರುಷರು ಹೊತ್ತು ತರುತ್ತಾರೆ, ತದನಂತರ ಗೋವುಗಳು(ಎತ್ತುಗಳು) ಓಡಿಸುವ ಪದ್ದತಿ ಅನಾಧಿಕಾಲದಿಂದಲೂ ನಡೆದು ಬಂದಿದೆ ಎನ್ನಲಾಗಿದೆ.