ನಾಯಕನಹಟ್ಟಿ:: ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು ಬೆಳಗ್ಗೆಯಿಂದಲೇ ಶ್ರೀ ಆಂಜನೇಯ ಸ್ವಾಮಿ ಗ್ರಾಮದ ಸರ್ವಭಕ್ತರು ಶ್ರೀ ಆಂಜನೇಯ ಸ್ವಾಮಿ ಪೂಜಾ ಕೈಕರಿಗಳು ನೆರವೇರಿಸಿದರು ರಥೋತ್ಸವಕ್ಕೆ ಬಣ್ಣ ಬಣ್ಣದ ಬಾವುಟ ಸಾವಿರಾರು ಹೂ ಮಾಲೆಗಳನ್ನು ಹಾಕಿ ಅಲಂಕರಿಸಲಾಯಿತು. ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ತಂದು ರಥೋತ್ಸವದಲ್ಲಿ ಕೂರಿಸಿ ಪ್ರತಿಷ್ಠಾಪಿಸಲಾಯಿತು.
ಇದೇ ವೇಳೆ ಮುಕ್ತಿ ಬಾವುಟ ಆರಾಧ್ಯ ಪ್ರಕ್ರಿಯೆ ನಡೆಯಿತು ಗ್ರಾಮದ ಕಲ್ಲಹಳ್ಳಿ ಮಂಜಣ್ಣ ರವರು ಒಂದು ಲಕ್ಷದ ಅರವತ್ತಾರು ಸಾವಿರ ರೂಪಾಯಿ ಮುಕ್ತಿ ಭಾವುಟವನ್ನು ಪಡೆದುಕೊಂಡರು.
ನೂರಾರು ಭಕ್ತರು ರಥೋತ್ಸವಕ್ಕೆ ಕೈ ಹಾಕಿ ಜೈ ಆಂಜನೇಯ ಜೈ ಆಂಜನೇಯAದು ಘೋಷವನ್ನು ಕೂಗುತ್ತಾ ಭಕ್ತರೂ ರಥವನ್ನು ಎಳೆದರೂ
ಜಾನಪದ ಶೈಲಿಯ ವೀರಗಾಸೆ ಡೊಳ್ಳು ತಮಟೆ ಸೇರಿದಂತೆ ರಥೋತ್ಸವಕ್ಕ ಮೆರಗು ನೀಡಿದವು ರಥೋತ್ಸವದ ವೇಳೆ ಭಕ್ತರು ಜನ ಸಂಮೋಹವನ್ನು ನೋಡಿ ಕಣ್ತುಂಬಿಕೊAಡರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿರೇಖಾ, ಎಸ್ ಮುತ್ತಯ್ಯ, ಎಸ್ ಚಂದ್ರಣ್ಣ, ಮಾಜಿ ಸದಸ್ಯ ಜೆ ರಾಜಣ್ಣ, ಗ್ರಾಮ್ ಪಂಚಾಯತಿ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ನಾಗವೇಣಿ ಮಂಜಣ್ಣ, ಪಿ ರಾಜಣ್ಣ, ಜಿ ಟಿ ಚೆನ್ನಪ್ಪ , ಎಸ್‌ಟಿಡಿ ತಿಪ್ಪೇಶ್, ಮಾಜಿಗ್ರಾಮ ಪಂಚಾಯಿತಿ ಸದಸ್ಯ ಎಂ ಬಿ ಬೋರಯ್ಯ, ದೇವಸ್ಥಾನ ಕಮಿಟಿಯ ಸದಸ್ಯರಾದ ಬೋ. ತಿಪ್ಪಯ್ಯ, ಬೂದಿ ಪಾಪಯ್ಯ, ರೇವಣ್ಣ ನೇರಲಗುಂಟೆಯ ಸಮಸ್ತ ಊರಿನ ಗ್ರಾಮಸ್ಥರು ಭಕ್ತಾದಿಗಳು ಇದ್ದರು

About The Author

Namma Challakere Local News
error: Content is protected !!