ಚಳ್ಳಕೆರೆ : ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜಿಲ್ಲಾ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಯೋಶೋಧರ ಅಧ್ಯಕ್ಷತೆಯಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಟಿ.ವಿರಭದ್ರಪ್ಪ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಪ್ರಾಥಮಿಕ ಸದಸ್ಯತ್ವನ್ನು ಪಡೆಯುವÀ ಮೂಲಕ ಪಕ್ಷಕ್ಕೆ ಸೇರ್ಪಡೆಯಾದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಯಶೋಧರ, ಮೊಳಕಾಲ್ಮುರು ಕ್ಷೇತ್ರದ ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರ ಸಮ್ಮುಖದಲ್ಲಿ ಟಿ.ವೀರಭದ್ರಪ್ಪ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಭೀಮಬಲ ಬಂದಿದೆ. ಇಂದಿನಿAದ ಪಕ್ಷದ ಸಂಘಟನೆಯಲ್ಲಿ ವೀರಭದ್ರಪ್ಪ ಅವರು ಸಕ್ರಿಯವಾಗಿ ಭಾಗವಹಿಸಿ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿನಾಯಕ, ಜಿಲ್ಲಾ ಕಾರ್ಯದರ್ಶಿ ರಾಜಣ್ಣ, ವೆಂಕಟೇಶ್, ಮೊಳಕಾಲ್ಮುರು ತಾಲ್ಲೂಕು ಜೆಡಿಎಸ್ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಕರಿಬಸಪ್ಪ, ಸಂಘಟನಾ ಕಾರ್ಯದರ್ಶಿ ಸುದೇಂದ್ರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಸಣ್ಣಪಾಲಯ್ಯ, ತಾಲ್ಲೂಕು ಓಬಿಸಿ ಅಧ್ಯಕ್ಷ ಚನ್ನಬಸಪ್ಪ, ತಾಲ್ಲೂಕು ಎಸ್ಸಿ ಕಾರ್ಯದರ್ಶಿ ರಾಜಣ್ಣ, ರೈತಘಟಕದ ಅಧ್ಯಕ್ಷ ಮಹೇಶ್, ಯುವಘಟಕದ ಉಪಾಧ್ಯಕ್ಷ ಎಲ್. ಬಸವರಾಜ್, ರಾಂಪುರ ಹೋಬಳಿ ಅಧ್ಯಕ್ಷ ಪಿ.ಅಂಜನಪ್ಪ, ಸೆಳ್ಳೆಗೌಡ ನೂರಾರು ಮೊಳಕಾಲ್ಮುರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.