ಚಳ್ಳಕೆರೆ : ನಮ್ಮ ಕಾಡುಗೊಲ್ಲರ ನ್ಯಾಯ ಯುತ ಬೇಡಿಕೆಗಾಗಿ ನಾಳೆ ಬೃಹತ್ ಪ್ರತಿಭಟನೆ ಮೂಲಕ ತಾಲೂಕು ಕಛೇರಿಯಲ್ಲಿ ಕಾಡುಗೊಲ್ಲ ಸಮುದಾಯದಿಂದ ಮನವಿ ಪತ್ರ ನೀಡಲಾಗುವುದು ಎಂದು ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು, ಅನೇಕ ವರ್ಷಗಳಿಂದ ನಾವು ಇನ್ನೂ ಅನಿಷ್ಟ ಪದ್ಧತಿಗಳಿಂದ ಹೊರ ಬಂದಿಲ್ಲ ಕಾರಣ ನಮಗೆ ಮೂಲಭೂತ ಸೌಲಭ್ಯಗಳಿಂದ ಶಿಕ್ಷಣ ಇಲ್ಲದೆ ನಮ್ಮ ಮಕ್ಕಳು ಇಂದಿಗೂ ಹಟ್ಟಿಗಳಳ್ಳಿ ಕನಿಷ್ಟ ಜೀವನ ನಡೆಸುವ ಅನಿವಾರ್ಯತೆ ಇದೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.
ಇನ್ನೂ ಕಾಡುಗೊಲ್ಲ ರಾಜ್ಯ ಸಂಚಾಲಕ ಮಾಜಿ ಜಿಪಂ.ಅಧ್ಯಕ್ಷ ರವಿಕುಮಾರ್ ಮಾತನಾಡಿ, ಇಡೀ ರಾಜ್ಯದಲ್ಲಿ ಸುಮಾರು ಜನಸಂಖ್ಯೆ ಹೊಂದಿರುವ ನಮಗೆ ಕೇವಲ 64 ಜಾತಿ ಪ್ರಮಾಣ ಪತ್ರ ಮಾತ್ರ ನೀಡಿದ್ದಾರೆ ಸರಕಾರ ಸ್ಪಷ್ಟವಾಗಿ ಗೆಜೆಟೆಡ್ ಮೂಲಕ ಕಾಡುಗೊಲ್ಲ ಎಂದು ನಮೂದಿಸಿ ಪ್ರಮಾಣ ಪತ್ರ ನೀಡಲು ಸುತ್ತೋಲೆ ನೀಡಿದೆ ಆದರೆ ಅಧಿಕಾರಿಗಳ ಬೇಜಾವಾಬ್ದಾರಿ ತನದಿಂದ ನಮ್ಮ ನ್ಯಾಯಯುತ ಹಕ್ಕು ಪಡೆಯಲು ಸೌಲಭ್ಯ ಪಡೆಯಲು ಹಾಗುತ್ತಿಲ್ಲ, ಇನ್ನೂ ಈಗೀರುವ ಮೀಸಲಾತಿಯಂತೆ ನಮಗೆ ಎಸ್ಟಿ ಸಮುದಾಯಕ್ಕೆ ಸೇರಿಸಿ ಅದರಂತೆ ಸೌಲಭ್ಯ ನೀಡಿ ಮುಖ್ಯವಾಹಿನಿಗೆ ತನ್ನಿ ಎಂದು ಒತ್ತಾಯಿಸಲು ಜ.25ರಂದು ಸುಮಾರು ಐದು ಸಾವಿರ ಕಾಡುಗೊಲ್ಲ ಸಮುದಾಯದಿಂದ ಬೃಹತ್ ಮೆರವಣೆಗೆ ಮೂಲಕ ತಹಶೀಲ್ದಾರ್ ಗೆ ಮನವಿ ನೀಡಲಾಗುವುದು ಎಂದರು.
ಕಾಡುಗೊಲ್ಲ ಸಂಘದ ಖಜಾಂಚಿ ಕಾಂತರಾಜ್ ಮಾತನಾಡಿ, ಜ25ರಂದು ನಡೆಯುವ ಬೃಹತ್ ಪ್ರತಿಭಟನೆಯು ಗೊಲ್ಲರ ಹಾಸ್ಟೆಲ್‌ನಿಂದ ಪ್ರಾರಂಭಗೊAಡು ನೆಹರು ವೃತ್ತದ ಮೂಲಕ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್‌ಗೆ ನಮ್ಮ ನ್ಯಾಯ ಯುತ ಬೇಡಿಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಈದೇ ಸಂಧರ್ಭದಲ್ಲಿ ಕಾಡುಗೊಲ್ಲ ಉಪಾಧ್ಯಕ್ಷ ಸುರೇಶ್, ಖಾಜಾಂಚಿ ಕಾಂತರಾಜ್, ಜನಾಂಗದ ಜಿ.ಕೆ.ವೀರಣ್ಣ, ಕಾಟಪನಹಟ್ಟಿ ವೀರೇಶ್, ನಿರ್ಸಗ ಗೋಂವಿದ್ ರಾಜ್, ಶ್ರೀನಿವಾಸ್, ರಂಗಸ್ವಾಮಿ, ಅಜ್ಜಣ್ಣ, ಕುರುಡಿಹಳ್ಳಿ ರಾಜು, ಸಿದ್ದಾಪುರ ಮಂಜುನಾಥ್, ಬಾನು ವೀರೇಶ್, ಜಯಣ್ಣ, ಇತರರು ಇತರರು .