ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೇಸ್
ಪಕ್ಷಕ್ಕೆ ಜನರ ಬೆಂಬಲ – ಜಾಜೂರು ಗ್ರಾಪಂ ಅಧ್ಯಕ್ಷೆ ಗೌರಮ್ಮರಂಗಪ್ಪ
ಸಮೀಪದ ಜಾಜೂರು ಗ್ರಾಪಂ ವ್ಯಾಪ್ತಿಯ ಮೋದೂರು, ಕಾಮಸಮುದ್ರ, ನಾಗಗೊಂಡನಹಳ್ಳಿ ಮತ್ತು ಜಾಜೂರು ಗ್ರಾಮಗಳ ಜನವಸತಿ ಪ್ರದೇಶಗಳಿಗೆ ತಾಲೂಕು ಬ್ಲಾಕ್‌ಕಾಂಗ್ರೇಸ್ ಘಟಕ ಹಾಗೂ ಜಾಜೂರು ಗ್ರಾಪಂ ವ್ಯಾಪ್ತಿಯ ಕಾಂಗ್ರೇಸ್ ಕಾರ್ಯಕರ್ತರ ಸಮ್ಮುಖದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಚಳ್ಳಕೆರೆಯ ಇತಿಹಾಸದಲ್ಲೇ ತಾಲೂಕಿನ ಭೌಗೋಳಿಕ ಇತಿಹಾಸವನ್ನೇ ಬದಲಾಯಿಸಿ ಜನರ ಅಗತ್ಯತೆಗೆ ತಕ್ಕಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಟ್ಟವರಲ್ಲಿ ಶಾಸಕ ಟಿ ರಘುಮೂರ್ತಿ ಅವರ ಶ್ರಮ ಸ್ಮರಣೀಯ ಎಂದರು
ಸಮಾಲೋಚನಾ ಸಭೆಯನ್ನು ಉಧ್ಘಾಟಿಸಿದ ಶಾಸಕ ಟಿ ರಘುಮೂರ್ತಿ ಮಾತನಾಡಿ ಚಳ್ಳಕೆರೆ ತಾಲೂಕಿನ ಜನರಿಗೆ ಇದ್ದ ಕುಂದು ಕೊರತೆಗಳನ್ನು ನೀಗಿಸಿ ಪ್ರತೀ ಗ್ರಾಮಗಳಿಗೂ ಸುಸಜ್ಜಿತ ಗ್ರಂಥಾಲಯ, ಶಾಲೆ, ಅಂಗನವಾಡಿ, ವಾಲ್ಮೀಕಿ, ಅಂಬೇಡ್ಕರ್ ಶ್ರೀ ಕೃಷ್ಣ ಬಾಬು ಜಗಜೀವನರಾಂ ಭವನಗಳನ್ನು ನಿರ್ಮಿಸಿಕೊಟ್ಟು ಪಿಆರ್‌ಪುರ ಹೋಬಳಿ ವ್ಯಾಪ್ತಿಯ ವೇದಾವತಿ ನದೀ ಪಾತ್ರದ ರೈತರಿಗೆ ಅಂತರ್ಜಲ ಕೊರತೆಯಾಗದಂತೆ ವೇದಾವತಿ ನದಿಗೆ ಅಲ್ಲಲ್ಲಿ ಬ್ಯಾರೇಜ್ ಮತ್ತು ಚೆಕ್‌ಡ್ಯಾಂ ನಿರ್ಮಿಸಿಕೊಟ್ಟಿದ್ದೇನೆ ಇನ್ನೂ ತಾಲೂಕಿನ ಕೆಲ ಸಮುದಾಯಗಳ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭಸವಸೆ ನೀಡಿದರು
ಇದೇ ವೇಳೆ ಜಾಜೂರು ಗ್ರಾಪಂ ವ್ಯಾಪ್ತಿಯ ನರಸಪ್ಪ, ಶ್ರೀನಿವಾಸ, ಓಬಣ್ಣ, ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಶಾಸಕರ ನೇತೃತ್ವದಲ್ಲಿ ಕಾಂಗ್ರೇಸ್ ಸೇರ್ಪಡೆಗೊಂಡರು
ಕಳೆದ ಏಳೆಂಟು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸ್ಥಿತಿಗತಿ ಕುರಿತು ವಿವಿಧ ಗ್ರಾಮಗಳ ಕಾಂಗ್ರೇಸ್ ಪಕ್ಷದ ಮುಖಂಡರ ಜೊತೆ ಶಾಸಕರು ಸಮಾಲೋಚಿಸಿದರು
ಸಂದರ್ಭದಲ್ಲಿ ಜಾಜೂರು ಗ್ರಾಪಂ ಅಧ್ಯಕ್ಷೆ ಗೌರಮ್ಮರಂಗಪ್ಪ, ಉಪಾಧ್ಯಕ್ಷ ಹೇಮಂತಕುಮಾರ, ಸದಸ್ಯರಾದ ರಂಜನ್, ವೈ ಪ್ರೇಮಕ್ಕಹನುಮಂತಯ್ಯ, ನರಸಿಂಹಪ್ಪ, ಸುರೇಶ, ಹೇಮಣ್ಣ, ಹೇಮಂತ, ವರಲಕ್ಷಿö್ಮÃ, ಹಂಪಣ್ಣ, ರಂಗನಾಥ, ಕಾಂಗ್ರೇಸ್ ಮುಖಂಡರಾದ ಜಗನ್ನಾಥ, ಸುರೇಶ, ರೆಡ್ಡಿಹಳ್ಳಿಶಿವಣ್ಣ, ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷ ಸೂರನಹಳ್ಳಿಶಿವಕುಮಾರಸ್ವಾಮಿ, ಸಂಪತ್, ನಾಗರಾಜು, ಜಾಜೂರು ನಾಗರಾಜು, ಹನುಮಂತಯ್ಯ, ವಿವಿಧ ಹಳ್ಳಿಗಳ ಕಾಂಗ್ರೇಸ್ ಕಾರ್ಯಕರ್ತರು ಗ್ರಾಮಸ್ಥರು ಇದ್ದರು
ಪೋಟೋ ಪರಶುರಾಮಪುರ ಸಮೀಪದ ಜಾಜೂರು ಗ್ರಾಪಂ ವ್ಯಾಪ್ತಿಯ ಮೋದೂರು, ಕಾಮಸಮುದ್ರ, ನಾಗಗೊಂಡನಹಳ್ಳಿ ಮತ್ತು ಜಾಜೂರು ಗ್ರಾಮಗಳ ಜನವಸತಿ ಪ್ರದೇಶಗಳಿಗೆ ತಾಲೂಕು ಬ್ಲಾಕ್‌ಕಾಂಗ್ರೇಸ್ ಘಟಕ ಹಾಗೂ ಜಾಜೂರು ಗ್ರಾಪಂ ವ್ಯಾಪ್ತಿಯ ಕಾಂಗ್ರೇಸ್ ಕಾರ್ಯಕರ್ತರ ಸಮ್ಮುಖದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಕೆಲ ಮುಖಂಡರು ಕಾಂಗ್ರೇಸ್ ಪಕ್ಷವನ್ನು ಸೇರಿದರು