ಚಳ್ಳಕೆರೆ : ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ರವರ ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿದರು.
ನಂತರ ಮಾತನಾಡಿದ ಮುಖಂಡ ಶಾಂತಕುಮಾರ್, ಇಂದು ನ್ಯಾ.ಸದಾಶಿವ ಆಯೋಗದ ವರಿದಿ ಜಾರಿ ಮಾಡಲು ಅನ್ಯ ಲಂಬಾಣಿ, ಭೋವಿ ಇತರೆ ಸಮುದಾಯಗಳು ಆಯೋಗ ಜಾರಿ ಮಾಡಬಾರದು ಎಂದು ಸರಕಾರದ ಮೇಲೆ ಒತ್ತಡ ತರುವುದು ಸರಿಯಲ್ಲ, ಸದಾಶಿವ ಆಯೋಗದ ವರದಿ ಒಮ್ಮೆ ಓದಿ ತಿಳಿದು ನಮ್ಮ ನ್ಯಾಯ ಯುತ ಹಕ್ಕು ಕೇಳಬೇಕು ಎಂದು ಆರೋಪಿಸಿದರು.
ನಂತರ ತಹಶೀಲ್ದಾರ್ ಎನ್.ರಘುಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿದ ಅವರು ನಿಮ್ಮ ಮನವಿಯನ್ನು ಯಥಾವತ್ತಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ರವಾನಿಸಲಾಗುವುದು ನ್ಯಾಯ ಸಮ್ಮತವಾದ ನಿಮ್ಮ ಬೇಡಿಕಗಳನ್ನು ಕ್ರಮ ಕೈಗೊಳ್ಳಲು ಮನವಿಯ ಅನುಗುಣವಾಗಿ ಪರಿಗಣಿಸುವಂತೆ ರವಾನಿಸುವೆ ಎಂದರು.
ಇನ್ನೂ ಮೈತ್ರಿ ದ್ಯಾಮಣ್ಣ ಮಾತನಾಡಿ, 2023-24ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರು ಶತ ಶತಮಾನಗಳಿಂದ ಅತ್ಯಂತ ಶೋಷಣೆಗೆ ಒಳಗಾದ ಸಮುದಾಯಗಳಾದ ಎಸ್.ಸಿ. (ಪರಿಶಿಷ್ಟ ಜಾತಿ) ಮತ್ತು ಪಂಗಡಗಳು ಎದುರಿಸುತ್ತಿರುವ ಸದರಿ ಸಮಸ್ಯೆಯ ಕುರಿತು ಮುಖ್ಯ ಹಕ್ಕೊತ್ತಾಯಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಈ ಮೂಲಕ ಆಗ್ರಹಿಸಲು ಅಹಿಂಸಾತ್ಮಕ ಪ್ರಜಾಸತ್ತಾತ್ಮಕ ವಿಧಾನಗಳಿಂದ ರಾಜ್ಯ/ರಾಷ್ಟ್ರೀಯ ಮಟ್ಟದಲ್ಲಿ ಪರಿಶಿಷ್ಟರು/ ಜೋಶಿತರು ಎದುರಿಸುತ್ತಿದ್ದಾರೆ ಎಂದರು.
ರಾಜ್ಯಸರ್ಕಾರಕ್ಕೆ ಮುಖ್ಯ ಹಕ್ಕೊತ್ತಾಯಗಳು :
ಎಸ್.ಸಿ. /ಎಸ್.ಟಿ. ಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಗೆಜೆಟ್ ಅಧಿಸೂಚನೆ ಜನವರಿ12 ರಂದು ಹೊರಬಿದ್ದಿದ್ದು ಸದರಿ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು. ಮತ್ತು ಸದರಿ ಕಾಯ್ದೆಯನ್ನು ಕೇಂದ್ರಕ್ಕೆ ರವಾನಿಸಿ ಕೇಂದ್ರ ಸರ್ಕಾರವು ಸಂವಿಧಾನ ತಿದ್ದುಪಡಿ ಮಾಡಿ ಸದರಿ ಕಾಯ್ದೆ 9ನೇ ಷೆಡ್ಯೂಲ್‌ನಲ್ಲಿ ಸೇರಿಸಿ ಮನುವಾದಿಗಳಿಂದ ಸದರಿ ಕಾಯ್ದೆಗೆ ಕಾನೂನಾತ್ಮಕ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು.
ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಪ್ರಗತಿ ನಿರಾಶದಾಯಕ ಗುರಿ ತಲುಪಲು ಎಲ್ಲಾ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ತಪ್ಪಿದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು.
ಎ.ಜೆ.ಸದಾಶಿವ ವಿವಿಧ ಪರಿಶಿಷ್ಟರಿಗೆ ಅವರವರ ಜನಸಂಖ್ಯಾವಾರುಗಳಿಗೆ, ಕೂಡಾ ಹಂಚಿಕೆ ಮಾಡುವುದು ಸಂವಿಧಾನದ ಸಮಾನತೆಯ ಆಶಯ ಸಾಧಿಸಲು ಅಗತ್ಯವಾಗಿದೆ. ಅಂತೆ ಪರಿಶಿಷ್ಟ ಜಾತಿಗಳು ಒಳಮೀಸಲಾತಿ ಜಾರಿ ಮಾಡುವಂತೆ ಶಿಫಾರಸ್ಸು ಮಾಡಿರುವ ನ್ಯಾಯಮೂರ್ತಿ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಬೇಕು. ರಾಜ್ಯ ಸರ್ಕಾರದ ವಿವಿಧ ನಿಗಮಗಳ ಅಡಿಯಲ್ಲಿ ಆರ್ಥಿಕ ಮತ್ತು ಭೌತಿಕ ಗುರಿಯನ್ನು ಹೆಚ್ಚಿಸುವುದರ ಮೂಲಕ ಎಲ್ಲಾ ಪರಿಶಿಷ್ಟ ನಿಗಮಗಳ ಎಲ್ಲಾ ಅರ್ಜಿದಾರರಿಗೂ ಸಾಲ ಸಬ್ಸಿಡಿಗಳು ಮಂಜೂರಾಗಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಅಂಬೆಡ್ಕರ್ ಸ್ವಾಭಿಮಾನಿ ತಾಲೂಕು ಅಧ್ಯಕ್ಷ ವಿನೋದ್ ಕುಮಾರ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್ ಕುಮಾರ್, ಸಾಮಾಜಿಕ ಸಂಘರ್ಷ ಸಮಿತಿ ಅದ್ಯಕ್ಷ ಉಮೇಶ್ ಚಂದ್ರ ಬ್ಯಾನರ್ಜಿ, ಶಿವಮೂರ್ತಿ, ಮಂಜುಳಾ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.