ಚಳ್ಳಕೆರೆ : ಬಿತ್ತನೆ ಮಾಡದೆ ಇರುವ ರೈತರ ಖಾತೆಗೆ ಹಣ ಜಮೆಯಾಗಿದ್ದು, ಬಿತ್ತನೆ ಮಾಡಿದ ರೈತನಿಗೆ ಬೆಳೆ ನಷ್ಟವಾದ ಪರಿಹಾರ ಜಮೆ ಯಾಗಿಲ್ಲ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದರು
ಚಳ್ಳಕೆರೆ ತಾಲೂಕು ಸತತ ಸುಮಾರು ಏಳು ವರ್ಷಗಳಿಂದಲೂ ಸಕಾಲಕ್ಕೆ ಮಳೆ ಬಾರದೆ ರೈತರು ಬಿತ್ತನೆ ಮಾಡಿದ ಬೆಳೆಗಳು ಅತಿ ವೃಷ್ಠಿ ಹಾಗೂ ಅನಾವೃಷ್ಠಿಗೆ ಸಿಲುಕು ರೈತರು ಹಾಕಿದ ಬಂಡವಾಳ ಸಿಗದೆ ನಷ್ಟ ಅನುಭವಿಸಲಿ ಸಾಲದ ಸುಳಿಗೆ ಸಿಲುಕಿದ್ದರೂ ಸಹ ಬೆಳೆ ಪರಿಹಾರ ಹಣವನ್ನು ಸರಕಾರ ಈಗಾಗಲೆ ಶೇ95 ರಷ್ಟು ರೈತರ ಖಾತೆಗೆ ಹಣ ನೀಡಲಾಗಿದೆ ಎಂದು ಸುಳ್ಳು ವರಸಿ ನೀಡಿದೆ ಎಂದಿ ಕಿಡಿಕಾರಿದರು. ಅಕಾಲಿಕ ಮೆಳೆಗೆ ಸಿಲುಕಿ ಬೆಳೆ ನಷ್ಟವಾಗಿರುವುದನ್ನು ಕೃಷಿ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಮಾಡಿದರೂ ಸಹ ಇನ್ನು ಹಲುವ ರೈತರಿಗೆ ಬೆಳೆ ಪರಿಹಾರ ಮೊತ್ತ ಜಮೆಯಾಗಿಲ್ಲ ಕೂಡಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಚನ್ನಗಾನಹಳ್ಳಿ ರಾಜಣ್ಣ, ರೆಡ್ಡಿನಾಯ್ಕ, ಕೆಆರ್‌ಎಸ್ ಪಕ್ಷದ ಮಹೇಶ್ , ತಿಪ್ಪೇಸ್ವಾಮಿ, ಸುರೇಶ್, ಶಶಿಕುಮಾರ್, ಬಸವರಾಜು, ರವಿ, ರತ್ನಮ್ಮ, ವೆಂಕಟೇಶ್, ಸಿರಿಯಣ್ಣ, ಸಣ್ಣಪಾಲಯ್ಯ, ರುದ್ರಪ್ಪರೆಡ್ಡಿ, ಜಯಮ್ಮ, ಇತರರಿದ್ದರಿದ್ದರು.