ಚಳ್ಳಕೆರೆ : ವಿದ್ಯಾರ್ಥಿಗಳು ಹೆತ್ತವರಿಗೆ ಕೀರ್ತಿ ತರುವ ಗುರಿ ಹೊಂದಬೇಕು ಪರೀಕ್ಷಾ ದಿನಗಳು ಹತ್ತಿರವಿದ್ದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳ ಪಡೆದು ಗ್ರಾಮಕ್ಕೆ ಕೀರ್ತಿ ತರುವ ಕೆಲಸವಾಗಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ರಾಜಣ್ಣ ಹೇಳಿದ್ದಾರೆ.
ಅವರು ತಾಲೂಕಿನ ದೇವÀರೆಡ್ಡಿಹಳ್ಳಿ ಕ್ಲಸ್ಟರ್ನ ದೇವರೆಡ್ಡಿಹಳ್ಳಿ ಶಾಲೆಯಲ್ಲಿ ಆಮ್ಮಿಕೊಂಡಿದ್ದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು,
ಕೋವಿಡ್ಗೂ ಮೊದಲು ಜಾರಿಯಲ್ಲಿದ್ದ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಮಾರ್ಪಾಡು ಮಾಡಿ ಕಲಿಕಾ ಹಬ್ಬವನ್ನು ಜಾರಿಗೆ ತರಲಾಗಿದೆ ಇದರಲ್ಲಿ ಶಿಕ್ಷಣದ ಮಹತ್ವ ಸರ್ಕಾರದ ಶೈಕ್ಷಣಿಕ ಯೋಜನೆಗಳ ಬಗ್ಗೆ ಪೋಷಕರು ಮತ್ತು ಸಮುದಾಯಕ್ಕೆ ತಿಳಿಸಿ ಕೊಡುವ ನಿಟ್ಟಿನಲ್ಲಿ ಹೆಚ್ಚು ಹೊತ್ತು ನೀಡಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಿವಣ್ಣ, ವಾಮಾಕ್ಷಿ, ನಾಗರಾಜು, ದನಜಂಯ, ರಾಜಪ್ಪ, ನಾಗರಾಜು, ಗೀತಾ, ಕಲ್ಲೆಶ್, ಹರೀಶ್ ಕುಮಾರ್, ವಾಮಾಕ್ಷಿ, ನವೀದಾಬೇಗಂ, ಇತರರು ಇದ್ದರು.