ಮಕ್ಕಳ ಕಲಿಕಾ ಹಬ್ಬಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಕಾಟಂಲಿಂಗಯ್ಯ ಚಾಲನೆ
ನಾಯಕನಹಟ್ಟಿ:: ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ ಪ್ರಾಥಮಿಕ ಅಂತದಿಂದಲೇ ಮಕ್ಕಳ ಮನಸ್ಸು ಅರಳಿಸುವ ಕೆಲಸವಾಗಬೇಕು ಎಂದು ಗ್ರಾ.ಪಂ ಅಧ್ಯಕ್ಷ ಡಾ.ಕಾಟಂಲಿಂಗಯ್ಯ
ಹೇಳಿದ್ದಾರೆ.
ಅವರು ಗುರುವಾರ ಹೋಬಳಿಯ
ಎನ್ ದೇವರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ
2023 -24ನೇ ಸಾಲಿನ ಎನ್ ಮಹದೇವಪುರ ಕ್ಲಸ್ಟರ್ ಮಕ್ಕಳ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ಶಿಕ್ಷಣ ಇಲಾಖೆ ಕಲಿಕಾ ಹಬ್ಬದ ಮೂಲಕ ಮಕ್ಕಳ ಮನಸ್ಥೈರ್ಯವನ್ನು ಹೆಚ್ಚಿಸುವ ಕೆಲಸವಾಗಬೇಕು ಪೋಷಕರು ಮಕ್ಕಳ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು
ಗ್ರಾ. ಪಂ.ಅಧ್ಯಕ್ಷ ಡಾ.
ಕಾಟಂಲಿಂಗಯ್ಯ ತಿಳಿಸಿದರು.
ಇನ್ನೂ ಮಕ್ಕಳ ಕಲಿಕಾ ಹಬ್ಬದ ಮೆರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ ತಿಪ್ಪೇಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕರಾದ ಡಿ ಎಸ್ ಪಾಲಯ್ಯ, ತಿಮ್ಮಪ್ಪಯ್ಯನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆರ್ ಮಂಜುಳಾ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಟಿ ಮಂಜುನಾಥ್, ಸಿ ಆರ್ ಪಿ ಹನುಮಂತಪ್ಪ ಸೇರಿದಂತೆ ಎನ್ ಮಹದೇವಪುರ ಕ್ಲಸ್ಟರ್ 18 ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಕ ಶಿಕ್ಷಕಿಯರು ಮತ್ತು 120 ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು