ಚಳ್ಳಕೆರೆ : ಕಳೆದ 20 ವರ್ಷಗಳ ನಂತರ ತವರು ಜಿಲ್ಲೆಯ ನಾಯಕನಹಟ್ಟಿಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಸಂತಸ ತಂದಿದೆ ಎಂದು ಸಮ್ಮೇಳನಾಧ್ಯಕ್ಷ ಬಿ.ತಿಪ್ಪಣ್ಣ ಮರಿಕುಂಟೆ ಹೇಳಿದರು.
ಅವರು ತಾಲೂಕಿನ ಬುಡಕಟ್ಟು ಸಮುದಾಯದ ದಕ್ಷಿಣ ಕಾಶಿಯಾದ ನಾಯಕನಹಟ್ಟಿಯಲ್ಲಿ ಆಯೋಜಿಸಿದ್ದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿರು, ಮಧ್ಯ ಕರ್ನಾಟಕದ ಸಾಹಿತ್ಯ ವಲಯದ ಬುಡಕಟ್ಟು ತವರೂರು ಎಂದು ಪ್ರಸಿದ್ದಿ ಪಡೆದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೆರುದ್ರ ಸನ್ನಿದಿಯಲ್ಲಿ ಸಮ್ಮೇಳನ ನಡೆಯುತ್ತರಿವುದು ಸಂತಸ ತಂದದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಮಾತನಾಡಿ, ಅಸಾಧ್ಯವಾದದ್ದು ಸಾಧ್ಯವನ್ನಾಗಿಸುವ ಶಕ್ತಿ ಇರುವುದು 16 ಅಂಕಿಗೆ ಮಾತ್ರ ಅಂತಹ ಒಂದು 16ನೇ ಸಾಹಿತ್ಯ ಸಮ್ಮೇಳ ನಾಯಕನಹಟ್ಟಿ ಆಚರಣೆ ಮಾಡುತ್ತಿರುವುದು ಕನ್ನಡಿಗರ ಭಾಗ್ಯವಾಗಿದೆ. ನಾಯಕನಹಟ್ಟಿ ಎಂಬ ಹೆಸರು ಬರಲು ಕಾರಣ ಹಟ್ಟಿ ಮಲ್ಲಪ್ಪ ನಾಯಕನ ಪರಿಶ್ರಮ ಇದಕ್ಕೆ ತಕ್ಕುದಾಗಿದೆ, ಜೀವನದಲ್ಲಿ ಒಮ್ಮೆಯಾದರೂ ರಾಜ್ಯದಲ್ಲಿ ನೋಡೆಲೇ ಬೇಕಾದ ಜಿಲ್ಲೆ ಅದು ಚಿತ್ರದುರ್ಗ ಜಿಲ್ಲೆ ಅದರಲ್ಲಿ ನಾಯಕನಹಟ್ಟಿ ಪವಾಡ ಪುರಷ ನೆಲಸಿದ ಸ್ಥಳ ಎನ್ನಬಹುದು. ಕರುನಾಡ ನೆಲದಲ್ಲಿ, ದುರ್ಗಾಸ್ತಮಾನದ ಕಾಂದಬರಿ ಓದಲೇಕು, ದುರ್ಗದ ಚರಿತ್ರೆ ತಿಳಿಯಬೇಕು ಎಂದರು.
ಇದೇ ನಾಯಕನಹಟ್ಟಿ ಸ್ಥಳದಲ್ಲಿ 2003ರಲ್ಲಿ ತಾಲೂಕು ಸಮ್ಮೇಳನ ಮಾಡುವ ಮೂಲಕ ತನ್ನ ಗರಿಮೆ ಉಳಿಸಿಕೊಂಡಿತ್ತು, ನಂತರ 19 ವರ್ಷಗಳ ನಂತರ ಈಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ಜರುಗುತ್ತಿರುವುದು ಸಂತಸ ತಂದಿದೆ. ಈಡೀ ಜಿಲ್ಲೆಯಲ್ಲಿ ತೆರೆಮರೆಯಲ್ಲಿ ಸಾಹಿತ್ಯ ಚಿಲುಮೆ ಹರಿಸುತ್ತಿರುವ ಗ್ರಾಮೀಣ ಯುವ ಸಾಹಿತಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವೇದಿಕೆ ಕಲ್ಪಿಸಲಿದೆ, ಕನ್ನಡವನ್ನು ನಾವು ತಿಳಿಯಬೇಕು ಜೊತೆಗೆ ಬೇರೆಯವರಿಗೂ ತಿಳಿಸಬೇಕು.
ಕನ್ನಡ ಶಾಲೆಗಳ ಸ್ಥಿತಿಗತಿ ಗಂಭೀರವಾಗಿದೆ, ಇನ್ನೂ ಕೇವಲ ಹತ್ತು ವರ್ಷಗಳ ಕಾಲ ಈಗೇ ಬಿಟ್ಟರೆ ಕರುನಾಡಲ್ಲಿ ಕನ್ನಡ ಉಳಿಯಲ್ಲ, ಕನ್ನಡ ಶಾಲೆಗಳು ಇರುವುದಿಲ್ಲ, ಈಗ ಕನ್ನಡ ಸರಕಾರಿ ಶಾಲೆ ಬದಲಾಗಿ ಪಬ್ಲಿಕ್ ಶಾಲೆ ಎಂದು ನಾಮಫಲಕ ಹಾಕುತ್ತಾರೆ, ಇದರಿಂದ ಕರುನಾಡಲ್ಲಿ ಸಂಪೂರ್ಣವಾಗಿ ನಮ್ಮ ಕನ್ನಡ ಸಾಯುತ್ತದೆ. ಆದ್ದರಿಂದ ರಾಜ್ಯ ಸರಕಾರ ಕನ್ನಡ ಉಳಿವಿಗೆ ಕ್ನನಡ ಶಾಲೆಗಳ ಬೆಳವಣಿಗೆಗೆ ಸುಘ್ರೀವಾಜ್ಞೆ ಹೊರಡಿಸಬೇಕು, ಕನ್ನಡದಲ್ಲಿ ಉದ್ಯೋಗ ನೀಡಬೇಕು, ನ್ಯಾಯಾಲಯದ ತೀರ್ಪು ಕೂಡ ಕನ್ನಡದಲ್ಲಿ ನೀಡಬೇಕು ಎಂದು ಸಮೇಳದಲ್ಲಿ ಒತ್ತಾಯಿಸಿದರು.
ನೂರಕ್ಕೆ ಶೇ.97ರಷ್ಟು ಮಳೆಯಾಳಂ ಮಾತನಾಡುತ್ತಾರೆ, ಮೊದಲನೆಯಾದಾಗಿ ಮಳೆಯಾಳಂ, ಎರಡನೇಯದಾಗಿ ತಮಿಳು, ಹಾಗೂ ಮೂರನೇ ಪ್ರಾಶ್ಚತ್ಯ ತೆಲುಗು ಮಾತನಾಡುತ್ತಾರೆ,
ದಕ್ಷಿಣ ಭಾರತದಲ್ಲಿ ಅತೀ ಕಡಿಮೆ ಕನ್ನಡ ಮಾತನಾಡುತ್ತಾರೆ, ನೂರಕ್ಕೆ ಶೇ.64ರಷ್ಟು ಮಾತ್ರ ಕನ್ನಡ ಮಾತನಾಡುತ್ತಾರೆ, ಆದ್ದರಿಂದ ತಾಯಿಯಂತೆ ಕನ್ನಡವನ್ನು ಪ್ರೀತಿಸಬೇಕು ಎಂದರು.
ನಿಕಟ ಪೂರ್ವ ಸಮ್ಮೇಳನದ ಅಧ್ಯಕ್ಷ, ಜಾನಪದ ತಜ್ಞರಾದ ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಕಳೆದ 20ವರ್ಷಗಳ ನೆನಪು ಮರುಕಳಿಸುತ್ತದೆ, ಬುಡಕಟ್ಟು ಸಂಸ್ಕೃತಿಯ ಕಾಶಿ ನಾಯಕನಹಟ್ಟಿಯಲ್ಲಿ ನೆಲೆಸಿದೆ, ಗ್ರಾಮೀಣ ಸಾಹಿತ್ಯ ಪರಿಷತ್ ಕಟ್ಟುವ ಮೂಲಕ ಈಡೀ ಗಡಿ ಭಾಗದಲ್ಲಿ ಸಾಹಿತ್ಯ ಚಿಲುಮೆ ಸಾರಿದ ತಿಪ್ಪಣ್ಣ ಮರಿಕುಂಟೆರವರ ಸಾಹಿತ್ಯದ ಗೀಳು ಇಂದು ಹೆಮ್ಮರವಾಗಿದೆ, ಸಾಹಿತಿಗಳ ನಾಡು ಎಂದರೆ ಅದು ಚಳ್ಳಕೆರೆ, ಇಲ್ಲಿ ಕುವೆಂಪುರವರ ಗುರುವಾದ ತಳಕಿನ ವೆಂಕಣಯ್ಯನವರ ತವರೂ ನೆಲದಲ್ಲಿ ಸಮ್ಮೇಳನ ಜರುಗುತ್ತಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಸ್ಥಳೀಯ ಕವಿಗಳನ್ನು ಗುರುತಿಸುವ ಕೆಲಸ ಇಂತಹ ಸಮ್ಮೇಳದ ವೇದಿಕೆಗಳಿಂದ ಹಾಗಬೇಕು, ಸಾಹಿತ್ಯ ಭಾಷೆ ಮೂಲಕ ನೆಲ ಮೂಲದ ಗರೀಮೆ ಹರಿಯಬೇಕು, ಹೃದಯ ಹೃದಯ ಮುಟ್ಟುವ ರೀತಿಯಲ್ಲಿ ಸಾಹಿತ್ಯ ಉಣಬಡಿಸುವ ಕಾರ್ಯ ಮಾಡಿರುತಾರೋ ಅವರೆ ನಿಜವಾದ ಕನ್ನಡಿಗರು, ಆದ್ದರಿಂದ ಶ್ರೀಸಿದ್ದೇಶ್ವರ ಸ್ವಾಮಿಜಿಗಳನ್ನು ಇಂದು ನೆನೆಯುವ ಸಂಧರ್ಭ ಇದಾಗಿದೆ, ಭಾಷೆ ಸಾಹಿತ್ಯ ಭಿನ್ನವಾಗಿದೆ, ಇಂದು ಟಿವಿ ಮಾದ್ಯಮದ ಕಾಮಿಡಿ ಶೋಗಳಲ್ಲಿ ಭಾಷೆ ಎಂಬುದು ಶೀಲವಿಲ್ಲದಾಗಿದೆ, ಆದ್ದರಿಂದ ಕನ್ನಡ ಭಾಷೆಗೆ ಶೀಲವಿದೆ, ಅದಕ್ಕೆ ರೂಪವಿದೆ, ಅದು ಕೇವಲ ಭಾಷೆಯಲ್ಲ ಅದು ನಮ್ಮ ತಾಯ್ನಡಿನ ಭಾಷೆ ಎಂದರು.
ಗಡಿ ಭಾಗದ ಮೊಳಕಾಲ್ಮೂರು ತಾಲೂಕಿನಲ್ಲಿ ಕನ್ನಡ ಭಾಷೆಗೆ ಬರವಿಲ್ಲ, ಈಗಲೂ ಸಹ ಗಡಿಯಂಚಿನಲ್ಲಿ ಕನ್ನಡ ಶಾಲೆಗಳಲ್ಲಿ ಇನ್ನೂರಿಂದ ಮೂನ್ನೂರು ಮಕ್ಕಳು ಕನ್ನಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಆದ್ದರಿಂದ ಕನ್ನಡ ಶಾಲೆಗಳ ಉಳಿವಿಗೆ, ಕಂಕಣ ಬದ್ದರಾಗಬೇಕು ಸಾಹಿತ್ಯವನ್ನು ಓದಿ ಬಿಡುವುದಲ್ಲ ಅದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕನ್ನಡಿಗರನ್ನು ಜಾಗೃತರನ್ನಾಗಿ ಮಾಡುವ ಕಾರ್ಯ ಮೊದಲು ಹಾಗಬೇಕು ಸಾಹಿತಿಗಳ ತವರು ನೆಲೆಯಾದ ತಳಕು ಗ್ರಾಮದಲಿ ಇನ್ನೂ ಅದಿನೈದು ದಿನಗಳಲ್ಲಿ ವೆಂಕಣ್ಣಯ್ಯನವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗುವುದು, ಮೊಳಕಾಲ್ಮೂರು ಸರಕಾರಿ ಶಾಲೆಗಳ ಕನ್ನಡ ಉಳಿವಿಗೆ ಶಿಥಿಲಗೊಂಡ ಶಾಲಾ ಕಟ್ಟಡಗಳಿಗೆ ಸುಮಾರು 10ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುವುದು, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ, ಜಗತ್ತಿನಲ್ಲಿ ಕನ್ನಡ ಭಾಷೆ ಸೌಂದರ್ಯಯುತ ಭಾಷೆ ಎಂದರು.
ಸಾಹಿತ್ಯ ಸಮ್ಮೇಳನ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ತಹಶೀಲ್ದಾರ್ ಎನ್.ರಘುಮೂರ್ತಿ, ರೈತ ಮುಖಂಡ ಕೆ.ಪಿ.ಭೂತಯ್ಯ, ಎತ್ತಿನಹಟ್ಟಿ ಗೌಡ್ರು, ಇಓ ಗಂಗಾಧರಪ್ಪ, ಇಓ ಹೊನ್ನಯ್ಯ, ಮುಖ್ಯಾಧಿಕಾರಿ ಟಿ.ಲೀಲಾವತಿ, ಬಿಇಓ ಕೆ.ಎಸ್.ಸುರೇಶ್, ವೃತ್ತ ನೀರೀಕ್ಷ ಕೆ.ಸಮಿವುಲ್ಲಾ, ಪಿಎಸ್‌ಐ ಜೆ.ಶಿವರಾಜ್, ಮುತ್ತುರಾಜ್, ಡಿ.ಓ.ಮೋರಾರ್ಜಿ, ಇತರರು ಇದ್ದರು.