ಚಳ್ಳಕೆರೆ : ಕನ್ನಡವೇ ಸತ್ಯ ಕನ್ನಡವೇ ನಿತ್ಯ ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಕಂಕಣಭದ್ಧರಾಗಬೇಕು ಎಂದು ಕೆಎಂ.ಶಿವಸ್ವಾಮಿ ಹೇಳಿದ್ದಾರೆ.
ಇದೇ ಜನವರಿ 21 – 22 ರಂದು ನಡೆಯಲಿರುವ 16ನೇ ಜಿಲ್ಲಾ ಸಮ್ಮೇಳನಕ್ಕೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಜರುಗಲಿದೆ.
ನಾಯಕನಹಟ್ಟಿ ಹಟ್ಟಿ ತಿಪ್ಪೆರುದ್ರೇಶನ ಸನ್ನಿಧಿಯಲ್ಲಿ ಮೊದಲ ಬಾರಿಗೆ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು ಈ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲಾ ಸಕಲ ಸಿದ್ಧತೆಗಳನ್ನು ಏರ್ಪಡಿಸಲಾಗಿದೆ ಆದ್ದರಿಂದ ಜಿಲ್ಲೆಯ ಜನಪ್ರತಿನಿಧಿಗಳು ಕನ್ನಡ ಸಾಹಿತ್ಯ ಆಸಕ್ತರು ಕನ್ನಡದ ಅಭಿಮಾನಿಗಳು ಕನ್ನಡದ ಮನಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕು ಮತ್ತು ಈ ಕಾರ್ಯಕ್ರಮಕ್ಕೆ ಈಗಾಗಲೇ ಸ್ಥಳೀಯವಾಗಿ ಪಟ್ಟಣ ಪಂಚಾಯಿತಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ತಾಲೂಕು ಆಡಳಿತ ಸೇರಿ ಎಲ್ಲರಲ್ಲೂ ಒಗ್ಗೂಡಿಸಿಕೊಂಡು ಸುಮಾರು ಐದಾರು ಸಭೆಗಳನ್ನು ಮಾಡಲಾಗಿದೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಐದು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಜನವರಿ 21ರ ಬೆಳಗ್ಗೆ 9:00 ಗಂಟೆಗೆ ಪಟ್ಟಣದ ರಾಜಭೀದಿಗಳಲ್ಲಿ ಬೃಹತ್ ಮೆರವಣಿಗೆಯಲ್ಲಿ ಸುಮಾರು 20 ಕಲಾತಂಡಗಳು ಭಾಗವಹಿಸಲಿವೆ ಈ ಹಿಂದೆ 20 ವರ್ಷಗಳ ಹಿಂದೆ ತಾಲೂಕು ಸಮ್ಮೇಳನ ನಡೆದಿತ್ತು ಇದೇ ಜನವರಿ 21, 22 ರಂದು ಪಟ್ಟಣದಲ್ಲಿ ಪ್ರಥಮ ಬಾರಿಗೆ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ಕನ್ನಡದ ರಥ ಎಳೆಯಲು ಸಹಕಾರ ನೀಡಿ ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಹಿತೈಷಿಗಳನ್ನು ಕರೆತನ್ನಿ ಎಂದಿದ್ದಾರೆ.