ಚಳ್ಳಕೆರೆ : ನನ್ನಿವಾಳ ವ್ಯಾಪ್ತಿಯ ಸುಮಾರು 35 ಹಟ್ಟಿಗಳನ್ನು ಒಳಗೊಂಡ ಭಕ್ತರ ಸಮ್ಮುಖದಲ್ಲಿ ಈ ಬಾರಿ ಭರ್ಜರಿಯಾಗಿ ಶೂನ್ಯದ ಮಾರಮ್ಮ ದೇವಿಯ ಜಾತ್ರೆ ಜರುಗಿತು,
ಗಡಿ ಭಾಗದ ಬುಡಕಟ್ಟು ಇತಿಹಾಸಕ್ಕೆ ಸಾಕ್ಷಿಯಾದ ಚಳ್ಳಕೆರೆ ತಾಲೂಕಿನ ನನ್ನಿವಾಳ ವ್ಯಾಪ್ತಿಯ 35 ಹಟ್ಟಿಗಳಲ್ಲಿ ಗೋವುಗಳ ಆರಾಧಕರಾದ ಭಕ್ತಗಣ ಇಂದು ತೊಡ್ಲರಹಟ್ಟಿಯ ಸಮೀಪದಲ್ಲಿ ನೂರಾರು ಭಕ್ತರು ಒಂದೆಡೆ ಸೇರಿ ಶೂನ್ಯದ ಮಾರಮ್ಮ ದೇವಿಯನ್ನು ಪೂಜಿಸುವುದು ಕಂಡು ಬಂದಿತು.
ಇನ್ನೂ ಈ ಭಾಗದ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕೂಡ ಭಾಗಹಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಶಾಸಕ ಟಿ.ರಘುಮೂರ್ತಿ..
ಈದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ, ಗ್ರಾಮ ಪಂಚಾಯತ್ ಸದಸ್ಯ ಅಪ್ಪಣ್ಣ, ದೊರೆ ಬೈಯಣ್ಣ, ಮುಖಂಡರುಗಳಾದ ಬೊಮ್ಮಣ್ಣ, ಚಂದ್ರಣ್ಣ, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.