ಚಳ್ಳಕೆರೆ : ಸದಾಶಿವ ಆಯೋಗದ ವರದಿ ಜಾರಿಗಾಗಿ ಹೊಲೆಮಾದಿಗರ ಬೃಹತ್ ಐಕ್ಯತಾ ಸಮಾವೇಶವನ್ನು ಜ.30 ರಂದು ಆಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ನಾಮ ನಿದೇರ್ಶನ ಸದಸ್ಯ ಎಂ.ಇAದ್ರೇಶ್ ಹೇಳಿದ್ದಾರೆ.
ಅವರು ನಾಯಕನಹಟ್ಟಿ, ತಳಕು ಹೊಬಳಿ ವಿಭಾಗದ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ರಾಜ್ಯದಲ್ಲಿ ಈಗಾಗಲೇ ನಮ್ಮ ಅನ್ನವನ್ನುಂಡು ನಮಗೆ ದ್ರೋಹ ಮಾಡುವ ಕೆಲವು ಸಮುದಾಯಗಳನ್ನು ಸದಾಶಿವ ಆಯೋಗ ವರದಿ ಜಾರಿ ಮಾಡಬಾರದು ಎಂದು ಪ್ರತಿಭಟನೆ ಮಾಡುತ್ತಿವೆ, ಆದ್ದರಿಂದ ನಾವು ಜಾಗೃತರಾಗಬೇಕು, ನಾವು ಬೇರೆಯವರ ಅನ್ನವನ್ನು ಕಸಿದುಕೊಳ್ಳುವುದಿಲ್ಲ ಆದರೆ ನಮ್ಮ ಅನ್ನವನ್ನು ಕಸಿದರೆ ಬಿಡುವುದಿಲ್ಲ ಆದ್ದರಿಂದ ಹೊಲೆಯ ಹಾಗೂ ಮಾದಿಗರು ಒಟ್ಟಾಗಿ ಹೋರಾಟ ಮಾಡೋಣ ಎಂದರು.
ಇನ್ನೂ ವಕೀಲರಾದ ಪಾಪಣ್ಣ ಮಾತನಾಡಿ, ಈಡೀ ರಾಜ್ಯದಲ್ಲಿ ಮೊದಲಿಗೆ ಹೊಲೆಯ ಮಾದಿಗರ ಐಕ್ಯತಾ ಸಮಾವೇಶವನ್ನು ಚಳ್ಳಕೆರೆ ನಗರದಲ್ಲಿ ಆಯೋಜಸಿಲಾಗಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಿ ಐಕ್ಯತಾ ಸಮಾವೇಶಕ್ಕೆ ಬಳ ನೀಡಬೇಕು ನಮ್ಮ ಹಕ್ಕು ಪಡೆಯಲಿ ಕಟಿ ಬದ್ದರಾಗೋಣ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಭೀಮಣ್ಣ, ವೆಂಕಟೇಶ್, ಬಾಲರಾಜ್, ಪ್ರಜಾಜೀವ ಪತ್ರಿಕೆ ಲಿಂಗರಾಜ್, ಹೊನ್ನೂರು ಮಾರಣ್ಣ, ಬಸವಾಜ್, ರಾಜಣ್ಣ, ನೇಹಮಲ್ಲೆಶ್, ಎತ್ತಿನಹಟ್ಟಿ ಓಬಳೇಶ್, ತಿಪ್ಪೆಸ್ವಾಮಿ, ಯಶವಂತ್ರಾಜ್, ಚಂದ್ರಶೇಖರ್, ರಾಘವೇಂದ್ರ, ಮಂಜಕ್ಕ, ತಿಪ್ಪೆರುದ್ರಪ್ಪ, ಗಿರಿಮಲ್ಲಿಗೆ ತಿಪ್ಪೆಸ್ವಾಮಿ, ಇತರರು ಇದ್ದರು.