ಚಳ್ಳಕೆರೆ : ಸಮೀಪದ ಪರ‍್ಲೆಹಳ್ಳಿಯ ವಸಲುದಿನ್ನೆಯಲ್ಲಿ ಗೊಲ್ಲರ ಆರಾದ್ಯ ದೈವ ಕ್ಯಾತಪ್ಪನ ಪರಿಷೆಯ ಅಂಗವಾಗಿ ಸೋಮವಾರ ಕಳ್ಳೆಗುಡಿಯನ್ನೇರಿದ ಐವರು ವೀರಾಗಾರರು ಕ್ಷಣಾರ್ಧದಲ್ಲಿ ಬರೀಗಾಲಲ್ಲಿ ಗುಡಿಯನ್ನತ್ತಿ ಶಿಖರದಲ್ಲಿನ ದೇವರ 5 ಕಂಚಿನ ಕಳಶಗಳನ್ನು ಕೆಳಗಿಳಿಸಿ ಜಾತ್ರೆಗೆ ತೆರೆ ಎಳೆದರು.
ಕ್ಯಾತಪ್ಪನ ಪರಿಷೆಗೆ ರಾಜ್ಯದ ವಿವಿಧೆಡೆಗಳಿಂದ ಸೋಮವಾರ ಆಗಮಿಸಿದ್ದ ಜನಸ್ತೋಮ ಶ್ರಧ್ದಾ-ಭಕ್ತಿಯಿಂದ ಅಕ್ಕಮ್ಮನ ಗುಡಿಯ ಬಳಿಯಲ್ಲಿನ ಮಜ್ಜನಬಾವಿಯ ನೀರಿನಲ್ಲಿ ಮಿಂದು ಗಂಗಾಪೂಜೆಯನ್ನು ಮಾಡಿಕೊಂಡು ಕಳ್ಳೇಗುಡಿಯಲ್ಲಿ ಪ್ರತಿಷ್ಟಾಪಿಸಿದ್ದ ಕ್ಯಾತೇದೇವರ ಸಮೂಹದ ದೇವರುಗಳಿಗೆ ಪ್ರದಕ್ಷಿಣೆ ಹಾಕಿ ದೇವರಿಗೆ ಹಣ್ಣು-ಕಾಯಿ.ಧನ.ಕನಕಗಳನ್ನು ಅರ್ಪಿಸಿದರು.
ಕಳ್ಳೆಗುಡಿಯಲ್ಲಿ ಪ್ರತಿಷ್ಟಾಪಿಸಿದ್ದ ಕೇತೇದೇವರು ವೀರಣ್ಣದೇವರು. ಬತವಿನದೇವರು.ತಾಳಿದೇವರು ಈರಣ್ಣ.ಸಿರಿಯಣ್ಣ. ಕರಿಯಣ್ಣ ದೇವರುಗಳಿಗೆ ನಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ ತಮ್ಮ ಕುಲದೇವರ ಜಾತ್ರೆಯ ಖರ್ಚು-ವೆಚ್ಚಕ್ಕೆ ಪ್ರತೀ ಮನೆಗೆ ವಿಧಿಸಿದ್ದ ಕರವನ್ನು ತಮ್ಮ ಗುಡಿಕಟ್ಟಯ ಗೌಡ-ಯಜಮಾನರಿಗೆ ನೀಡಿ ಲೆಕ್ಕ ಬರೆಯಿಸಿದರು
ಒಂದೆಡೆ ಜಾತ್ರೆಗೆ ಆಗಮಿಸಿದ್ದ ಮಹಿಳೆಯರು-ಮಕ್ಕಳು ಜಾತ್ರೆಯಲ್ಲಿನ ಕಾಸ್ಮೆಟಿಕ್ಸ್ ಕೊಳ್ಳಲು ಮುಗಿಬಿದ್ದು ಕಾರ.ಮಂಡಕ್ಕಿ, ಗೃಹೋಪಯೋಗಿ ವಸ್ತುಗಳನ್ನು ಕೊಂಡರೆ. ಮತ್ತೆ ಕೆಲವರು ಜಾತ್ರೆಯಲ್ಲಿ ನೆರೆದಿದ್ದ ವಿವಿಧ ಕಲಾತಂಡಗಳ ಕಲಾ ಪ್ರದರ್ಶನ ವೀಕ್ಷಿಸಿದರು.
ಯುವಕರು. ಹಿರಿಯರು. ವಿವಿಧೆಡೆಯಿಂದ ಬಂದಿದ್ದ ಗುಡಿಕಟ್ಟೆಯ ಭಕ್ತರು ಕಳ್ಳೆಗುಡಿಯನ್ನು ವೀರಗಾರರು ಯಾವಾಗ ಏರಿ ಮೊದಲ ಕಳಶವನ್ನು ಕೀಳುವ ವೀರನ್ಯಾರೋ ಎಂಬ ಕುತೂಹಲದಿಂದ ನೂಕುನುಗ್ಗಲಿನಲ್ಲಿ ಹರಸಾಹಸ ಪಟ್ಟು ಮಿಣಿಕಿ-ಮಿಣಿಕಿ ಕಳ್ಳೆಗುಡಿಯತ್ತ ನೋಡುತ್ತಿದ್ದರೆ ಮತ್ತೆ ಕೆಲವರು ಪೊಲೀಸರ ಸರ್ಪಗಾವಲನ್ನು ಬೇಧಿಸಿ ಗುಡಿಯತ್ತ ಧಾವಿಸುತ್ತಿದ್ದರು.
ಸಂಜೆ ಸರ‍್ಯಾಸ್ತದ ವೇಳೆಗೆ ಐವರು ವೀರಗಾರರಾದ ಚೌಳೂರು ಬಿ ಎಸ್ ರಾಜು, ಕರ‍್ಲಕುಂಟೆ ಜಿ ಎಸ್ ಮಹಾಲಿಂಗ, ದ್ವಾರನಕುಂಟೆ ರಾಘವೇಂದ್ರ, ಕೆಟಿಹಳ್ಳಿ ಪುನಿತ್, ಈಶ್ವರಗೆರೆಯ ಧ್ಯಾನ, ಈ ಐವರೂ ವೀರಗಾರರು ಗುಡಿಕಟ್ಟೆಯ ಹಿರಿಯರ ಅಪ್ಪಣೆ ಪಡೆದು ತಾ-ಮುಂದು ನಾ ಮುಂದು ಎಂದು ಪೊಲೀಸ್ ಅಧಿಕಾರಿಗಳ ಹಸಿರು ನಿಶಾನೆ ಪಡೆದುಕೊಂಡು ಒಂದೇ ಬಾರಿ ಐವರೂ ವೀರಗಾರರು ಹತ್ತಾರು ಅಡಿಯ ಬಾರೆ-ಕಾರೆ-ಬಂದ್ಲೆ-ತುಗ್ಗಲಿಯ ಕಳ್ಳೆಯಿಂದ ನಿರ್ಮಿಸಿದ್ದ ಗುಡಿಯನ್ನು ಬರಿಗಾಲು.ಬರೀಮೈಯಲ್ಲಿ ಏರಿ ಕಳಶಗಳನ್ನು ಕಿತ್ತರು ಆದರೆ ಈ ಐವರಲ್ಲಿ ಮೊದಲಿಗೇ ಕಳ್ಳೆಗುಡಿ ಏರಿದ ಚೌಳೂರು ಬಿ ಎಸ್ ರಾಜು ಮೊದಲ ಕಳಶ ಕೈಲಿ ಕಿತ್ತು ಕೊಂಡು ಕೇಕೆಹೊಡೆಯುತ್ತಾ ಎಲ್ಲರಿಗಿಂತ ಮೊದಲೇ ಕೆಳಗಿಳಿದು ಬಂದನು ಭಕ್ತರು ಈ ವೀರಗಾರನನ್ನು ಮೇಲೆತ್ತಿ ಕೇಕೆ ಶಿಳ್ಳೆ ಹೊಡೆದು ಸಂಭ್ರಮಿಸಿ ಚೌಳೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಮೆರಣಿಗೆ ಕೈಗೊಂದರು
ಅಂತಿಮವಾಗಿ ಕಳ್ಳೇಗುಡಿಯ ಮೇಲಿನ ಶಿಖಿರದ ಮೊದಲ ಕಳಶವನ್ನು ಚೌಳೂರು ವೀರಗಾರ ಬಿ ಎಸ್ ರಾಜು ಕಿತ್ತುಕೊಂಡು ಸಂಭ್ರಮದಿAದ ಎಲ್ಲರಿಗಿಂತ ಮೊದಲು ಕೆಳಗಿಳಿದು ಈ ವರ್ಷದ ವೀರಗಾರ ಎಂಬ ಪಟ್ಟಕ್ಕೆ ಆಯ್ಕೆಯಾದನು.ಈ ವೇಳೆ ಪೂಜಾರರು ಕೊರಳಿಗೆ ಹೂಹಾರ ಹಾಕಿ ಜಯಘೋಷ ಕೂಗಿದರು.
ಕಳ್ಳೇಗುಡಿಯನ್ನು ವೀರಗಾರರು ಏರಿ ಕಳಶವನ್ನು ಕಿತ್ತ ಕ್ಷಣಾರ್ಧದಲ್ಲಿ ಪೂಜಾರಿಗಳು ದೇವರ ಮೂರ್ತಿಗಳನ್ನು ಹೊತ್ತು ಅವರವರ ಊರಿಗೆ ಹೋಗಲು ಹೊರಟರೆ ಜಾತ್ರೆಗೆ ಬಂದವರು ತಮ್ಮ ಊರುಗಳಿಗೆ ಕಾಲು ಕಿತ್ತರು. ವಿವಿದೆಡೆಗಳಿಂದ ಲಘುವಾಹನ, ಆಟೋ, ದ್ವಿಚಕ್ರವಾಹನಗಳು, ಎತ್ತಿನಗಾಡಿಗಳಲ್ಲಿ ಜನರು ಜಾತ್ರೆಗೆ ಆಗಮಿಸಿದ್ದರು.
ಪೊಲೀಸರು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಯಾವುದೇ ತೊಂದರೆಯಾಗದAತೆ ನೋಡಿಕೊಂಡರು.
ಈ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಂದರ್ಭದಲ್ಲಿ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಸ್ಥಳೀಯ ಶಾಸಕ ಟಿ.ರಘುಮೂರ್ತಿ, ಮಾಜಿ ಎಂಎಲ್ಸಿ ಜಯಮ್ಮಬಾಲರಾಜು, ಚೌಳೂರು ಗ್ರಾಪಂ ಅಧ್ಯಕ್ಷ ಚಿಕ್ಕಣ್ಣ, ಉಪಾಧ್ಯಕ್ಷ ವಿಜಯಕುಮಾರ, ಮುಖಂಡರಾದ ಕೆಟಿ.ಕುಮಾರಸ್ವಾಮಿ, ಎಂ.ರವೀಶಕುಮಾರ, ಡಿಟಿ.ಶ್ರೀನಿವಾಸ, ಎಸ್ಪಿ ಕೆ.ಪರಶುರಾಮ, ಡಿವೈಎಸ್‌ಪಿ ರಮೇಶಕುಮಾರ, ಸಿಪಿಐ ಸಮೀವುಲ್ಲಾ, ಪಿಎಸ್‌ಐಗಳಾದ ಎಸ್.ಕಾಂತರಾಜು, ಬಸವರಾಜು, ಭಕ್ತರಾದ ಶಾಂತಮ್ಮ, ವೀರಣ್ಣ, ದೇವರಾಜು, ಕೆಂಗಪ್ಪ, ರಘು, ವೀರೇಶ, ಹದಿಮೂರು ಗುಡಿಕಟ್ಟೆಯ ಅಣ್ಣತಮ್ಮಂದಿರು-ನೆAಟರಿಷ್ಟರು ಸಹಸ್ರಾರು ಭಕ್ತರು ಇದ್ದರು.