ಚಳ್ಳಕೆರೆ : ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಗ್ರಾಮದಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಕ ವೃತ್ತಿಗೆ ಮಹತ್ತರ ಸ್ಥಾನವಿದೆ ಹಿಂದಿನ ಕಾಲದಿಂದಲೂ ಗುರುವಿಗೆ ವಿಶೇಷವಾದ ಮಹತ್ವ ನೀಡುವ ಮೂಲಕ ಗುರುವಿನ ಹಾದಿಯಲ್ಲಿ ನಾವು ನೀವೆಲ್ಲರೂ ನಡೆಯಬೇಕು ಆದ್ದರಿಂದ ಇಂದಿನ ಮಕ್ಕಳು ಮುಂದಿನ ಸತ್‌ಪ್ರಜೆಯಾಗಲು ಗುರುವಿನ ಮಾರ್ಗ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ , ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್, ಪದಾಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷಬಸವರಾಜ್, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮುಖಂಡರುಗಳು ಮತ್ತು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.