ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ರೂಡ ಬಿಜೆಪಿ ಪಕ್ಷ ಜನರ ರಕ್ತ ಹೀರುವ ಸರಕಾರವಾಗಿದೆ, ಬೆಲೆ ಏರಿಕೆಯಿಂದ ಜನರು ದಿಕ್ಕು ತೋಚದಂತಾಗಿದ್ದು ಕೂಲಿ ಮಾಡುವ ಜನರು ಬೀದಿ ಪಾಲಾಗುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ ರವೀಶ್ ಕುಮಾರ್ ಕಿಡಿ ಕಾರಿದ್ದಾರೆ.
ನಗರದ ಪಾವಗಡ ರಸ್ತೆಯಲ್ಲಿ ಭರಮಸಾಗರ ಗ್ರಾಮದ ಅಯ್ಯಪ್ಪ ಮಾಲದಾರಿಗಳು ಶಬರಿಮಲೆಗೆ ತೆರಳುವ ಸಂದರ್ಭದಲ್ಲಿ ಶುಭಾಶಯ ಕೋರಿ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಬಗ್ಗೆ ಜನತೆಯಲ್ಲಿ ಅರಿವು ಉಂಟಾಗಿದ್ದು ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ತಾಲೂಕಿನ ರೈತರ 160 ಕೋಟಿ ಸಾಲ ಮನ್ನಾ ಆಗಿದ್ದು ಇದರಿಂದ ರೈತರು ಸಂತಸಗೊAಡಿದ್ದಾರೆ.

ಮುAದಿನ ದಿನಗಳಲ್ಲಿ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಜೆಡಿಎಸ್ ಪಕ್ಷ 123 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು
ಕರ್ನಾಟಕದ ನಂದಿನಿ ಹಾಲು ಉತ್ಪಾದನೆಯನ್ನು ಅಮುಲ್ ನೊಂದಿಗೆ ವಿಲೀನ ಗೊಳಿಸಲು ರಾಜ್ಯ ಸರ್ಕಾರ ಹೊರಟಿದ್ದು ರೈತರಿಗೆ ದ್ರೋಹ ಬಗೆಯುತ್ತಿದೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿ ಪ್ರಾದೇಶಿಕತೆಯನ್ನು ಚಿವುಟಿ ಹಾಕಲು ಹೊರಟಿದೆ ಎಂದು ಹೇಳಿದರು
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಜನರು ನಿರಸನರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಗ್ರಾಮೀಣ ಭಾಗದ ಜನರು ಈ ಬಾರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೆ ತರುತ್ತೇವೆ ಎಂಬ ಅಭಯವನ್ನು ನೀಡುತ್ತಿದ್ದಾರೆ, ತಾಲೂಕಿನ ನನ್ನಿವಾಳ ದೊಡ್ಡೇರಿ, ಪರಶುರಾಮಪುರ ಹೋಬಳಿಗಳಲ್ಲಿ ಪಕ್ಷವು ಬಲಗೊಳ್ಳುತ್ತಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಈ ವೇಳೆ ಜೆಡಿಎಸ್ ಕಾರ್ಯಕರ್ತರಾದ ರಾಜಣ್ಣ, ನಿಂಗಣ್ಣ ರಮೇಶ್, ತಿಪ್ಪೇಸ್ವಾಮಿ, ಕಾಪರಹಳ್ಳಿ ಕುಮಾರ ಮನುದೊರೆ ಹನುಮಂತ, ಶ್ರೀನಿವಾಸ, ರವೀಂದ್ರ, ಈರಣ್ಣ, ಲಚ್ಚನಾಯ್ಕ ಹನುಮಂತಚಾರ್ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!