ಬಯಲು ಸೀಮೆಯಲ್ಲಿ ನರೇಗಾ ವರದಾನ : ಪಿಡಿಓ ಓಬಣ್ಣ
ಚಳ್ಳಕೆರೆ : ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಸರಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ನೀಡಿದೆ ಅದ್ದರಿಂದ ಗ್ರಾಮದ ಎಲ್ಲಾ ಸಾರ್ವವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಓ.ಓಬಣ್ಣ ಹೇಳಿದ್ದಾರೆ.
ಅವರು ತಾಲೂಕಿನ ಜಾಜೂರು ಗ್ರಾಪಂ.ವ್ಯಾಪ್ತಿಯ ಕಾಮಸಮುದ್ರ ಗ್ರಾಮದಲ್ಲಿ ಸುಮಾರು 80ಜನರಿಗೆ ನರೇಗಾ ಯೋಜನೆಯಲ್ಲಿ ಉದ್ಗೋಗ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅರಸಿ ವಲಸೆ ಹೋಗಬಾರದು, ತಾವಿದಲ್ಲಿಗೆ ಉದ್ಯೋಗ ನೀಡುವ ಸರಕಾರದ ಮಹತ್ವ ಯೋಜನೆಗೆ ನೀವು ಅರ್ಜಿ ಹಾಕಿದ ಮರು ದಿನವೇ ಉದ್ಯೋಗ ನೀಡಲಾಗುವುದು ಎಂದರು.
ಇನ್ನೂ ಉದ್ಯೋಗ ನಿರತ ಮಹಿಳೆಯರಾದ ಗೌರಮ್ಮ, ತಿಪ್ಪಮ್ಮ, ಲಕ್ಷಿö್ಮÃದೇವಿ ಮಾತನಾಡಿ, ಸರಕಾರದಿಂದ ನೀಡಿತ್ತಿರುವ ಈ ಕೆಲಸ ನಮ್ಮ ಬಾಳಿಗೆ ನೆರವಾಗಿದೆ, ಅದರಂತೆ ಪಿಡಿಒ ಬಂದಾಗಿನಿAದ ಗ್ರಾಮೀಣ ಭಾಗದ ಉದ್ಯೋಗದ ದಾಹ ತೀರಿದಂತಿಗೆ ಬಡ ಜನರಿಗೆ ಉದ್ಯೋಗ ಹಂಚುವ ಮೂಲಕ ಬಯಲು ಸೀಮೆಯ ಜನತೆಗೆ ವರದಾನವಾಗಿದೆ ಎಂದಿದ್ದಾರೆ.
ಇದೇ ಸಂಧರ್ಭದಲ್ಲಿ ಗ್ರಾಪಂ.ಅಧ್ಯಕ್ಷೆ ಗೌರಮ್ಮ, ವೆಂಕಟೇಶ್, ಮುಖಂಡ ರಂಗಪ್ಪ, ಪಿಡಿಓ ಓಬಣ್ಣ, ಇಂಜಿನಿಯಾರ್ ಉಮೇಶ್, ಬಿಎಪ್‌ಟಿ ಭೂಪಾಲನಾಯ್ಕ್, ಕಂಪ್ಯೂಟರ್ ಆಪೇರಟರ್ ಶಾಂತಕುಮಾರ್ ಇತರ ಉದ್ಯೋಗಸ್ಥ ನಿರತು ಹಾಜರಿದ್ದರು.

About The Author

Namma Challakere Local News
error: Content is protected !!