ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ : ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.ಬಸಪ್ಪನಾಯಕ
ಚಳ್ಳಕೆರೆ : ಮನುಷ್ಯರು ಆರೋಗ್ಯವಂತರಾಗಿರಲು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ.ಬಸಪ್ಪನಾಯಕ ಹೇಳಿದ್ದಾರೆ.
ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಮಾದಯ್ಯನಹಟ್ಟಿ ಗ್ರಾಮದಲ್ಲಿ ಪೀಪಲ್ ಆರ್ಗಾನೈಜೇಷನ್ ಮತ್ತು ಗೂಂಜ್ ಸಂಸ್ಥೆ ದೆಹಲಿ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಆರೋಗ್ಯವೇ ನಮ್ಮ ಭಾಗ್ಯ ಎಂಬುವAತೆ ಗ್ರಾಮೀಣ ಪ್ರದೇಶದಲ್ಲಿ ತಮ್ಮ ತಮ್ಮ ಮನೆಯ ಸುತ್ತಮುತ್ತ ತೊಟ್ಟಿ, ಚರಂಡಿ ಸೇರಿದಂತೆ ಸ್ವಚ್ಛತೆ ಮಾಡಲು ಮುಂದಾಗಬೇಕು ಇತ್ತೀಚಿನ ದಿನಗಳಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದ್ದು ಈ ಸಾಂಕ್ರಾಮಿಕ ರೋಗಗಳು ಬಾರದಂತೆ ಜನರು ತಮ್ಮ ಮನೆಯ ಸುತ್ತಮುತ್ತ ಶುಚಿತ್ವಗೊಳಿಸಬೇಕು ಗ್ರಾಮದ ಮಹಿಳೆಯರು ಪುರುಷರು ಸೇರಿದಂತೆ ನಮ್ಮ ಮಾದಯ್ಯನಹಟ್ಟಿ ಗ್ರಾಮವನ್ನು ಇಂದು ಸ್ವಚ್ಛತೆಯಲ್ಲಿ ಭಾಗವಹಿಸಿ ಗ್ರಾಮವನ್ನು ಸ್ವಚ್ಛಗೊಳಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಕೆಪಿ. ತಿಪ್ಪೇಸ್ವಾಮಿ, ಜೆಆರ್.ರವಿಕುಮಾರ್, ಪ್ರಗತಿ ಸಮೃದ್ಧಿ ಕೋ ಆಪರೇಟ್ ಬ್ಯಾಂಕ್ ಅಧ್ಯಕ್ಷ ಕೆ.ಕಲ್ಲೇಶ್, ಎಚಿಟಿ.ಮಂಜುನಾಥ್ ಜಾಗನೂರಹಟ್ಟಿ, ಆರ್.ತಿಪ್ಪೇಸ್ವಾಮಿ (ಸಾಯಿಬಾಬಾ), ಸೇರಿದಂತೆ ಗ್ರಾಮದ ಯಜಮಾನರು ಮಹಿಳೆಯರು ಪುರುಷರು ಉಪಸ್ಥಿತರಿದ್ದರು