ಸಾರ್ವಜನಿಕರ ಹಿತ ಕಾಯುವ ಮೂಲಕ ಅಧಿಕಾರಿಗಳು ಕಾರ್ಯಸನ್ನದರಾಗಿ : ಸಾರಿಗೆ ಸಚಿವ ಬಿ.ಶ್ರೀರಾಮುಲು

ಚಳ್ಳಕೆರೆ : ಮೊಣಕಾಲ್ಮೂರು ಕ್ಷೇತ್ರದ ವ್ಯಾಪ್ತಿಯ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ 48 ಗ್ರಾಮಗಳನ್ನು ಈಗಾಗಲೇ ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು ಉಳಿದಂತ ಎಲ್ಲಾ ಗ್ರಾಮಗಳನ್ನು ಕೂಡ ಸಾರ್ವಜನಿಕರ ಪೌತಿಕತೆ, ದರಕಾಸ್ತು, ಪೋಡಿದಾರಿ ವಿವಾದಗಳು ಮತ್ತು ಬಗರು ಹುಕುಂ ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸಾರಿಗೆ ಸಚಿವ ಬಿ ಶ್ರೀರಾಮುಲು ಚಳ್ಳಕೆರೆ ತಹಸಿಲ್ದಾರ್ ಎನ್.ರಘುಮೂರ್ತಿಗೆ ಸೂಚಿಸಿದರು.

ತಾಲೂಕಿನ ಸಾರ್ವಜನಿಕರು ಸರ್ಕಾರಿ ಕಚೇರಿಗೆ ಶೇಕಡಾ 80ರಷ್ಟು ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಿರುವುದು ಶ್ಲಾಘನೀಯ, ಜನರಿಗೆ ಸರ್ಕಾರದ ಮೇಲೆ ಸಾರ್ವಜನಿಕರಿಗೆ ಭರವಸೆ ಉಂಟಾಗುವ ಹಾಗೆ ಉಳಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಶೇಕಡ ನೂರಕ್ಕೆ ನೂರರಷ್ಟು ಪೂರ್ಣಗೊಳಿಸಿ ಇದೊಂದು ಮಾದರಿ ತಾಲೂಕು ಹಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಶೇಕಡ 95 ರಷ್ಟು ರೈತರಿಗೆ ಬೆಳೆ ಪರಿಹಾರವನ್ನು ನೀಡಲಾಗಿದೆ,

ತಳಕು ಮತ್ತು ನಾಯಕನಹಟ್ಟಿ ಹೋಬಳಿಯಲ್ಲಿ ಬಾಕಿ ಉಳಿದಿರುವಂತಹ ಎಲ್ಲ ಗ್ರಾಮಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮುಂದಿನ ಎರಡು ತಿಂಗಳೊಳಗಾಗಿ ಮಾಡಲಾಗುವುದು, ಜಿಲ್ಲಾಧಿಕಾರಿಗಳು ಹಾಗೂ ಸಾರಿಗೆ ಸಚಿವರ ಆದೇಶದಂತೆ ಎಲ್ಲಾ ಕೆಲಸ ಕಾರ್ಯಗಳು ಎರಡು ತಿಂಗಳು ಒಳಗೆ ಪೂರ್ಣ ಗೊಳಿಸಲಾಗುವುದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಹೊನ್ನೂರು ಗೋವಿಂದಪ್ಪ, ಹನುಮಂತನಹಳ್ಳಿ ತಿಮ್ಮಾರೆಡ್ಡಿ, ತಹಸಿಲ್ದಾರ್ ಎನ್ ರಘುಮೂರ್ತಿ, ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!