ಚಲಿಸುತ್ತಿರುವ ಬಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು
ಚಳ್ಳಕೆರೆ : ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿ ಅಯಾ ತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತ ಪಟ್ಟ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಳ್ಳಕೆರೆಯಿಂದ ಗೋಪನಹಳ್ಳಿ ಮಾರ್ಗವಾಗಿ ಮಧ್ಯಾಹ್ನ 1.30 ರ ಸುಮಾರಿನಲ್ಲಿ ಖಾಸಗಿ ಬಸ್ ಪಾವಗಡ ರಸ್ತೆಯ ಎಂ ಆರ್ ಪಿ ಬಾರ್ ಬಳಿ ರೆಡ್ಡಿಹಳ್ಳಿ ಗ್ರಾಮದ ಚೇತನ(17) ಚಲಿಸುತ್ತಿದ್ದ ಬಸ್ ನಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಚಳ್ಳಕೆರೆ ಪೊಲೀಸ್ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿ ಚಳ್ಳಕೆರೆ ನಗರದ ಸರಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತ ಎನ್ನಲಾಗಿದೆ.
ಇನ್ನೂ ಸ್ಥಳಕ್ಕೆ ಪಿಎಸ್ಐ ತಿಮ್ಮಣ್ಣ, ಸಿಬ್ಬಂದಿ ಮಂಜುನಾಥ್ ಮುಡುಕಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ.