ನಾಯಕನಹಟ್ಟಿ:: ಶಿಬಿರಾರ್ಥಿಗಳು ತರಬೇತಿಯಲ್ಲಿ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಂಡು ಸ್ವಸಹಾಯ ಸಂಘಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ.ಲೀಲಾವತಿ ಹೇಳಿದ್ದಾರೆ.
ಅವರು ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನಾಡಿಯ ಇಲಾಖೆ ಚಿತ್ರದುರ್ಗ ಇವರ ಸಹಯೋಗದೊಂದಿಗೆ ನಾಯಕನಹಟ್ಟಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯ ಸ್ವಸಾಯ ಸಂಘಗಳಿಗೆ ಪುಸ್ತಕ ಬರಹಗಾರರಿಗೆ ಒಂದು ದಿನದ ಪುಸ್ತಕ ಬರೆಯುವ ತರಬೇತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶಿಬಿರಾರ್ಥಿಗಳು ಉತ್ತಮವಾಗಿ ಸ್ವಸಹಾಯ ಸಂಘಗಳನ್ನು ಬೆಳೆಸುವಲ್ಲಿ ಮುಂಚುಣಿಯಲ್ಲಿರಬೇಕು ಎಂದರು.
ಇದೆ ವೇಳೆ ಜಿಲ್ಲಾ ಅಭಿಯಾನ ವ್ಯವಸ್ಥಾಪಕಿ ಸೌಮ್ಯ ಚಿತ್ರದುರ್ಗ ಇವರು ಮಾತನಾಡಿ ನಾಯಕನಹಟ್ಟಿ ಪಟ್ಟಣದಲ್ಲಿ ಪ್ರಥಮವಾಗಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಈ ಒಂದು ತರಬೇತಿ ಕಾರ್ಯಗಾರ ಆರಂಭವಾಗಿದೆ ಮುಖ್ಯವಾಗಿ ಸಮರ್ಥ ಅಭಿವೃದ್ಧಿ ತರಬೇತಿಯ ಎಲ್ಲಾ ಸ್ವಸಹಾಯ ಸಂಘದ ಪ್ರತಿನಿಧಿಗಳು ಪದಾಧಿಕಾರಿಗಳು ಸಂಘದ ಸದಸ್ಯರು ಸ್ವಸಹಾಯ ಸಂಘವನ್ನ ಸಮರ್ಥ ಅಭಿವೃದ್ಧಿ ಪದದ ತಕೊಂಡೆಯಲು ಪ್ರತಿಯೊಬ್ಬ ಸದಸ್ಯರು ಪುಸ್ತಕ ಬರವಣಿಗೆ ಉತ್ತಮ ನಿರ್ವಹಣೆ ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ವ್ಯವಹಾರ ನಡೆಸುವುದು ಸ್ವಸಾಯ ಸಂಘಗಳ ಉತ್ತಮ ಬೆಳವಣಿಗೆ ಸೇರಿದಂತೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಅಭಿಯಾನ ವ್ಯವಸ್ಥಾಪಕಿ ಸೌಮ್ಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಸಮುದಾಯ ಸಂಘಟನಾ ಅಧಿಕಾರಿ ಪಿ ಬಸಣ್ಣ, ಸಮುದಾಯ ಸಂಘಟನಾಧಿಕಾರಿ ನಾಗರತ್ನಮ್ಮ, ಸಮುದಾಯ ಸಂಪನ್ಮೂಲ ವ್ಯಕ್ತಿ ರೇಣುಕಮ್ಮ, ಸೇರಿದಂತೆ ಸ್ವಸಹಾಯ ಸಂಘದ ಶಿಬಿರಾರ್ಥಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!